ದೆಹಲಿಯಲ್ಲಿ ಮನೆ ಬಾಗಿಲಿಗೇ ಸಾರಾಯಿ ಪೂರೈಕೆಗೆ ಅನುಮತಿ | ಷರತ್ತು ಅನ್ವಯ!

Prasthutha|

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮದ್ಯ ಮಾರಾಟಗಾರರು, ಮದ್ಯ ಪ್ರಿಯರಿಗೆ ಮನೆಗೇ ಸಾರಾಯಿ ಪೂರೈಕೆ ಮಾಡಬಹುದು. ಆನ್‌ಲೈನ್‌ ಆಪ್‌ ಅಥವಾ ವೆಬ್‌ಸೈಟ್‌ಗಳ ಮೂಲಕ ಮನೆಗಳಿಗೆ ಸಾರಾಯಿ ಪೂರೈಸಬಹುದು ಎಂದು ದೆಹಲಿ ಆಲ್ಕೊಹಾಲ್‌ ವ್ಯವಹಾರದ ಮಾರ್ಗಸೂಚಿಯಲ್ಲಿ ತಿದ್ದುಪಡಿ ತರಲಾಗಿದೆ.

- Advertisement -

ಆದರೆ, ಕೆಲವೊಂದು ಷರತ್ತುಗಳನ್ನೂ ವಿಧಿಸಲಾಗಿದೆ. ಮದ್ಯ ಪೂರೈಕೆಗೆ ಪರವಾನಗಿ ಹೊಂದಿದವರು, ಸೆಲ್ಯುಲರ್‌ ಆಪ್‌ ಅಥವಾ ಆನ್‌ಲೈನ್‌ ಇಂಟರ್ನೆಟ್‌ ಪೋರ್ಟಲ್‌ ಗಳಲ್ಲಿ ಮದ್ಯ ಪೂರೈಸಬಹುದು. ಹಾಸ್ಟೆಲ್‌, ಕೆಲಸದ ಸ್ಥಳ, ಸಂಸ್ಥೆಗಳ ಸ್ಥಳಕ್ಕೆ ಪೂರೈಸುವಂತಿಲ್ಲ.

ಎಲ್‌ -13 ಪರವಾನಗಿ ಹೊಂದಿದವರು ಮಾತ್ರ ಈ ಪೂರೈಕೆ ಮಾಡಬಹುದು. ಎಲ್ಲಾ ಮದ್ಯ ಮಾರಾಟ ಅಂಗಡಿಗಳಿಗೆ ಈ ಅನುಮತಿಯಿಲ್ಲ.

- Advertisement -

ಕೋವಿಡ್‌ ಪ್ರಕರಣಗಳಿಂದ ತತ್ತರಿಸಿದ್ದ ದೆಹಲಿಯಲ್ಲಿ ಏ.19ರಿಂದ ಲಾಕ್‌ಡೌನ್‌ ಜಾರಿಯಲ್ಲಿದೆ. ಇದೀಗ ಲಾಕ್‌ಡೌನ್‌ ನಿಧಾನಕ್ಕೆ ಹಿಂಪಡೆಯುವ ಪ್ರಕ್ರಿಯೆಯಲ್ಲಿ ಸರಕಾರ ನಿರತವಾಗಿದೆ.



Join Whatsapp