ಮಧ್ಯಪ್ರದೇಶ : ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವ ಲಕ್ಷ್ಮಿಕಾಂತ್‌ ಶರ್ಮಾ ಕೋವಿಡ್‌ ಗೆ ಬಲಿ

Prasthutha|

ಭೋಪಾಲ್‌ : ಮಧ್ಯಪ್ರದೇಶದ ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವ ಲಕ್ಷ್ಮಿಕಾಂತ್‌ ಶರ್ಮಾ ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದಾರೆ. 60ರ ಹರೆಯದ ಶರ್ಮಾ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

- Advertisement -

ಶರ್ಮಾರ ಅಂತ್ಯ ಸಂಸ್ಕಾರವನ್ನು ಅವರ ತವರು ಜಿಲ್ಲೆ ವಿದಿಶಾದ ಹಿರಿಯರ ಮನೆಯಲ್ಲಿ ನಡೆಸಲಾಗಿದೆ. ಶರ್ಮಾ ಸಿರೊಂಜ್‌ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮಧ್ಯಪ್ರದೇಶದ ಮಾಜಿ ಸಿಎಂಗಳಾದ ಉಮಾ ಭಾರತಿ, ಬಾಬುಲಾಲ್‌ ಗೌರ್‌ ಮತ್ತು ಹಾಲಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಸರಕಾರಗಳಲ್ಲಿ ಶರ್ಮಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ವ್ಯಾಪಂ ಹಗರಣದಲ್ಲಿ ಶರ್ಮಾರ ಹೆಸರು ಕೇಳಿಬಂದಿತ್ತು. ಆದರೆ, ನಂತರ ಸಿಬಿಐ ಅವರಿಗೆ ಕ್ಲೀನ್‌ ಚಿಟ್‌ ನೀಡಿದೆ. ಶರ್ಮಾ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

Join Whatsapp