ದೆಹಲಿಯ ಮದ್ಯ ಪ್ರಕರಣ: ಔರಬಿಂದೋ ಫಾರ್ಮಾದ ಶರತ್ ರೆಡ್ಡಿ ಸಹಿತ ಇಬ್ಬರ ಬಂಧನ

Prasthutha|

ನವದೆಹಲಿ: ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಮದ್ಯ ವ್ಯಾಪಾರಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.

- Advertisement -

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆರ್ನೋಡ್ ರಿಕಾರ್ಡ್’ನ ಬಾಬು ಮತ್ತು ಔರಬಿಂದೋ ಫಾರ್ಮಾದ ಶರತ್ ರೆಡ್ಡಿ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇಡಿ ಇಲ್ಲಿಯವರೆಗೆ ಹಲವು ಕಡೆಗಳಲ್ಲಿ ಶೋಧ ಮತ್ತು ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.

ಸೆಪ್ಟೆಂಬರ್’ನಲ್ಲಿ ಮದ್ಯ ತಯಾರಿಕಾ ಕಂಪೆನಿ ಇಂಡೋಸ್ಪಿರಿಟ್’ನ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹಂದ್ರು ಅವರನ್ನು ಬಂಧಿಸಲಾಗಿತ್ತು.

- Advertisement -

ಅಲ್ಲದೆ ಈ ತಿಂಗಳ ಆರಂಭದಲ್ಲಿ ಜಾರಿ ನಿರ್ದೇಶನಾಲಯ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ಕಾರ್ಯದರ್ಶಿ ಕಚೇರಿಯ ಮೇಲೆ ದಾಳಿ ನಡೆಸಿತ್ತು ಮತ್ತು ಅವರನ್ನು ದೆಹಲಿಯ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಸಿತ್ತು.

Join Whatsapp