ಗ್ರಾಹಕರಿಗೆ ವಂಚನೆ: ನಾಲ್ಕು ರೇಷನ್ ಅಂಗಡಿಗಳ ಲೈಸನ್ಸ್ ರದ್ದು

Prasthutha|

ಯಾದಗಿರಿ: ಗ್ರಾಹಕರಿಗೆ ಸರಿಯಾಗಿ ಪಡಿತರ ವಿತರಣೆ ಮಾಡದೆ ವಂಚಿಸುತ್ತಿದ್ದ ಯಾದಗಿರಿ ಜಿಲ್ಲೆಯ ನಾಲ್ಕು ನ್ಯಾಯಬೆಲೆ ಅಂಗಡಿಗಳ ಲೈಸನ್ಸ್​ ಅನ್ನು ಆಹಾರ ಇಲಾಖೆ ಉಪ ನಿರ್ದೇಶಕ ಭೀಮಾರಾಯ ರದ್ದು ಮಾಡಿದ್ದಾರೆ.

- Advertisement -

ಯಾದಗಿರಿ ಜಿಲ್ಲೆಯಾದ್ಯಂತ‌ ಸುಮಾರು 401 ನ್ಯಾಯಬೆಲೆ ಅಂಗಡಿಗಳಿವೆ. ಇದೆ ನ್ಯಾಯಬೆಲೆ ಅಂಗಡಿಗಳಿಂದ ಗ್ರಾಹರಿಕೆ ಪಡಿತರ‌ ವಿತರಣೆ ಮಾಡಲಾಗುತ್ತದೆ. ಆದರೆ ಗ್ರಾಹರಿಗೆ ಸರಿಯಾಗಿ ಸೇವೆ ನೀಡದೆ ಮೋಸದ ಕೆಲಸ ಮಾಡಿದ ನಾಲ್ಕು ನ್ಯಾಯಬೆಲೆ ಅಂಗಡಿಗಳ ಲೈಸನ್ಸ್ ಈಗ ರದ್ದಾಗಿದೆ. ಯಾದಗಿರಿ ತಾಲೂಕಿನ ಪಗಲಾಪುರ, ಅಚ್ಚೊಲಾ, ಕೊಯಿಲೂರ್ ಹಾಗೂ ಹಳಗೇರ ಗ್ರಾಮದ ನ್ಯಾಯಬೆಲೆ ಅಂಗಡಿಗಳ ಪರವಾನಿಗೆಯನ್ನು ಆಹಾರ ಇಲಾಖೆ ಉಪ ನಿರ್ದೇಶಕ ಭೀಮಾರಾಯ ರದ್ದು ಮಾಡಿದ್ದಾರೆ.

ಈ ನಾಲ್ಕು ಅಂಗಡಿಗಳ ಡೀಲರ್‌ಗಳು ಗ್ರಾಹಕರಿಗೆ ಮೋಸ ಮಾಡುತ್ತಿದ್ದರು. ಪ್ರತಿ ತಿಂಗಳು ಅಂಗಡಿಯ ವ್ಯಾಪ್ತಿಯ ಪ್ರತಿಯೊಬ್ಬರಿಗೂ ಪಡಿತರ ಅಕ್ಕಿ, ಜೊಳವನ್ನು ಕೊಡದೆ ಮೋಸ ಮಾಡುತ್ತಿದ್ದರು. ಪಡಿತರ ಕಾರ್ಡ್‌ದಾರರಿಂದ ಹೆಬ್ಬೆಟ್ಟು ಗುರುತು ಪಡೆದು ಅಕ್ಕಿಯನ್ನು ನೀಡದೆ ಈ ತಿಂಗಳು ಬಂದಿಲ್ಲ ಅಂತ ಹೇಳಿ ಗೋಡೌನ್​ನಲ್ಲಿ ಸ್ಟಾಕ್ ಇಟ್ಟುಕೊಂಡು ಮೋಸ ಮಾಡಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು.

- Advertisement -

ಇನ್ನು, ಕೊಯಿಲೂರು ಗ್ರಾಮದ ಅಂಗಡಿಯ ಡೀಲರ್ ಕಳೆದ ಕೆಲ ತಿಂಗಳುಗಳಿಂದ ಪ್ರತಿಯೊಬ್ಬ ಗ್ರಾಹಕನಿಂದ ಒಂದು‌‌ ಕೆ‌ಜಿ ಅಕ್ಕಿಯನ್ನು ಕಡಿತಗೊಳಿಸುವ ಕೆಲಸ ಮಾಡುತ್ತಿದ್ದ ಎಂದು ದೂರುಗಳು ಬಂದಿದ್ದವು. ಇದೆ ಕಾರಣಕ್ಕೆ ಕಾರಣ‌ ಕೇಳಿ ನೋಟೀಸ್ ನೀಡಿದ್ದರೂ ಉತ್ತರ ನೀಡಿರಲಿಲ್ಲ. ಹೀಗಾಗಿ ಲೈಸನ್ಸ್ ರದ್ದು ಮಾಡಲಾಗಿದೆ.



Join Whatsapp