ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ: ವಿವಿಧ ಸಂಘಟನೆಗಳು ನೀಡಿರುವ ಬಂದ್ ಕರೆಗೆ SDPI ಬೆಂಬಲ

Prasthutha|

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆಯಲ್ಲಿ ಸುಪ್ರಿಂ ಕೋರ್ಟಿನಲ್ಲೂ ರಾಜ್ಯಕ್ಕೆ ಹಿನ್ನೆಡೆಯಾಗಿರುವ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಲು ವಿವಿಧ ಸಂಘಟನೆಗಳು ನೀಡಿದ ಬಂದ್ ಕರೆಗೆ ಎಸ್‌ಡಿಪಿಐ ಪಕ್ಷ ಬೆಂಬಲ ಸೂಚಿಸಿದೆ.

- Advertisement -

ಕಾವೇರಿ ನದಿ ನೀರು ಹಂಚಿಕೆ ಸಂಬಂಧದ ವಿಚಾರಣೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ತೀರ್ಪಿನ ವಿರುದ್ಧ ರೈತರು, ಸಾರ್ವಜನಿಕರು, ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಎಲ್ಲಾ ಸಂಘಟನೆಗಳು ಹಮ್ಮಿಕೊಳ್ಳುವ ಶಾಂತಿಯುತ ಪ್ರತಿಭಟನೆಗೆ ಎಸ್‌ಡಿಪಿಐ ಪಕ್ಷ ನೈತಿಕ ಬೆಂಬಲ ನೀಡಲಿದೆ ಮತ್ತು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಿದೆ. ಬೆಂಗಳೂರಿನಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ಕಾವೇರಿ ವಿವಾದದ ಬಗ್ಗೆ ವಿಸೃತವಾಗಿ ಚರ್ಚಿಸಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

SDPI ರಾಜ್ಯ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ಕಾವೇರಿ ವಿವಾದದ ಬಗ್ಗೆ ಹೇಳಿಕೆ ಬಿಡುಗಡೆ

- Advertisement -

ಎಸ್ ಡಿ ಪಿ ಐ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸಭೆ ಇಂದು ಬೆಂಗಳೂರಿನಲ್ಲಿ ನಡೆಯಿತು. ಕಾವೇರಿ ವಿವಾದದ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಹೇಳಿಕೆ ಬಿಡುಗಡೆ ಮಾಡಲಾಯಿತು.

ಕಳೆದ 125 ವರ್ಷಗಳಲ್ಲಿ ಇಷ್ಟು ಕಡಿಮೆ ಮಳೆ ಬಂದಿರುವುದು ಮೊದಲು. ಈ ಬಾರಿ ಕಾವೇರಿ ಕೊಲ್ಲದ ಜಲಾಶಯಗಳು ಕೇವಲ ಮೂವತ್ತಾರು ಶೇಕಡ ಮಾತ್ರ ನೀರು ತುಂಬಿದೆ. ಕಬಿನಿ, ಕೆ ಆರ್ ಎಸ್, ಹೇಮಾವತಿ,ಹಾರಂಗಿ ಜಲಾಶಯಗಳಲ್ಲಿ ಒಟ್ಟು 47.15 ಟಿಎಂಸಿ ಮಾತ್ರ ಶೇಖರಣೆಯಾಗಿದೆ. ಕಾವೇರಿ ನದಿಯಿಂದ ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ ಮೊದಲಾದ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇದಕ್ಕಾಗಿ ಸದ್ಯ ಉಪಯೋಗಕ್ಕೆ ಬರುವುದು 37.56 ಟಿಎಂಸಿ ನೀರು ಮಾತ್ರ. ಸೆಪ್ಟೆಂಬರ್ 28ರ ವರೆಗೆ ತಮಿಳುನಾಡಿಗೆ ಪ್ರತಿದಿನ 5000 ನಾಕು ಟಿಎಂಸಿ ಹರಿಸದರೆ ನೀರು ಖಾಲಿಯಾಗಲಿದೆ. ನೀರಿನ  ಒಳ ಹರಿವು ಸದ್ಯ  ಹೆಚ್ಚಾಗುವ ಸಾಧ್ಯತೆ ಕಡಿಮೆ.

ಈ ವಿಷಯದಲ್ಲಿ ರಾಜ್ಯ ಸರ್ಕಾರ ನಿಯೋಗ ಪ್ರಧಾನಿ ಮೋದಿಯನ್ನು ಭೇಟಿಯಾಗಿ ಕರ್ನಾಟಕದ ಸಮಸ್ಯೆಯನ್ನು ತಿಳಿಸಲು ಪ್ರಯತ್ನಿಸಿದಾಗ ಬೇಟಿಗೆ ಅವಕಾಶ ಕೊಡಲಿಲ್ಲ. ವಿತ್ತ ಸಚಿವ ನಿರ್ಮಲಾ ಸೀತಾರಾಮ್ ರವರು ರಾಜ್ಯ ಸರ್ಕಾರ ಕರೆದ ಸರ್ವ ಪಕ್ಷ ಸಭೆಗೆ ಬರಲಿಲ್ಲ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ರವರ ನಡೆ ಖಂಡನೀಯ. ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಪಕ್ಷದ 25 ಸಂಸತ್ ಸದಸ್ಯರು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ ಮಧ್ಯಸ್ಥಿಕೆ ವಹಿಸುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಸಹ ಪ್ರಾಧಿಕಾರದ ಆದೇಶ ಬರುವುದಕ್ಕಿಂತ ಮೊದಲೇ ತಮಿಳುನಾಡಿಗೆ ನೀರನ್ನು ಬಿಟ್ಟಿದೆ.ಇದಕ್ಕೆ ಏನು ಕಾರಣ ಎಂದು ಜನತೆಗೆ ತಿಳಿಸಬೇಕು. ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಪಕ್ಷ ಅಧಿಕಾರದಲ್ಲಿದ್ದ ಕಾರಣ ರಾಜಕೀಯ ಒತ್ತಡದಿಂದ ನೀರನ್ನು ಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಕಾವೇರಿ ವಿಷಯದಲ್ಲಿ ಪ್ರತಿವರ್ಷ ಕರ್ನಾಟಕದಲ್ಲಿ ಆಡಳಿತ ನಡೆಸಿದ ಮೂರು ಪಕ್ಷಗಳಿoದ ಕನ್ನಡಿಗರಿಗೆ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. ಸುಪ್ರೀಂ ಕೋರ್ಟ್ ಮತ್ತು ಪ್ರಾಧಿಕಾರದಲ್ಲಿ ಸಮರ್ಥವಾಗಿ ವಾದ ಮಾಡುವ ಪರಿಣಿತರ ಕೊರತೆ ಇದೆ. ಈ ವಿವಾದ ಶಾಶ್ವತವಾಗಿ ಪರಿಹಾರ ಕಂಡು ಹಿಡಿಯಲು  ಕಾನೂನು ತಜ್ಞರು, ನೀರಾವರಿ ತಜ್ಞರು, ಒಳಗೊಂಡ ಉನ್ನತ ಮಟ್ಟದ ಶಾಶ್ವತ ಸಮಿತಿ ರಚಿಸಬೇಕು. ಅದು ಸದಾಕಾಲ ಕಾವೇರಿ ನೀರಿನ ಹಂಚಿಕೆ ಬಗ್ಗೆ ನಿರಂತರ ಮಾಹಿತಿ ಇಟ್ಟುಕೊಳ್ಳಬೇಕು. ಈ ವಿಷಯದಲ್ಲಿ ರಾಜ್ಯ ಸರ್ಕಾರ ಕೂಡಲೇ ದಿಟ್ಟ ಹೆಜ್ಜೆ ಇಡಬೇಕು. ಯಾವುದೇ ರಾಜಕೀಯ ಪಕ್ಷಗಳು ನಾಡಿನ ಜಲ,ಕಾಡು,ಭೂಮಿ,ಪರಿಸರ,ರೈತ ಬಾಂಧವರು ವಿಷಯದಲ್ಲಿ ಸಮಸ್ಯೆ ಬಂದಾಗ ಒಂದಾಗಿ  ನಿಲ್ಲಬೇಕು. ಆರೋಪ ಪ್ರತ್ಯಾರೋಪ ಸರಿಯಲ್ಲ. ಈ ವಿಷಯದಲ್ಲಿ ನೆರೆಯ ರಾಜ್ಯಗಳ ರಾಜಕಾರಣಿಗಳಿಂದ ನಾವು ಪಾಠ ಕಲಿಯಬೇಕು ಎಂದು ಎಸ್ ಡಿಪಿಐ ಸಲಹೆ ನೀಡಿದೆ. ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಂಗಾರಪ್ಪನವರ ಅಧಿಕಾರದ ಅವಧಿಯಲ್ಲಿ ಎಷ್ಟೇ ಕಾನೂನು ತೊಡಕು ಬಂದರು ಧೈರ್ಯದಿಂದ ಹೊರ ರಾಜ್ಯಕ್ಕೆ ನೀರು ಬಿಟ್ಟಿರಲಿಲ್ಲ. ಈಗಿನ ಸರ್ಕಾರವು ಇದೇ ನಡೆಯನ್ನು ಪಾಲಿಸಬೇಕು. ಪ್ರತಿವರ್ಷ ತಮಿಳುನಾಡಿಗೆ 419TMC ನೀರು,ಕರ್ನಾಟಕಕ್ಕೆ  270TMC ನೀರು ನಿಗದಿ ಮಾಡಲಾಗಿದೆ.ಆದರೆ ‌ಮಳೆ ಕಡಿಮೆ ಆದ ಸಂದರ್ಭದಲ್ಲಿ ನೀರು ಹಂಚಿಕೆ ಸಮಸ್ಯೆ ಎದುರಾಗುತ್ತದೆ ಆಗ ಸಂಕಷ್ಟ ಸೂತ್ರ ರಚಿಸಬೇಕಿತ್ತು.

ರಾಜ್ಯದ 175 ತಾಲೂಕುಗಳು ಬರಪೀಡಿತವಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಿದರೆ ಕುಡಿಯುವ ನೀರಿಗೂ ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ಸಂಸದರು, ಸಚಿವರು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ನಮ್ಮ ರಾಜ್ಯದ ಬಿಜೆಪಿ ಸಂಸದರು ಮಾಡಬೇಕು. ಕಾವೇರಿ ವಿವಾದ ಬಗ್ಗೆ ನಡೆಯುವ ಎಲ್ಲಾ ಹೋರಾಟಗಳು ಶಾಂತವಾಗಿ ನಡೆಯಬೇಕು. ಯಾರದೇ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಸಮಾಜ ಬಾಹಿರ ಶಕ್ತಿಗಳು ಇದರ ಲಾಭ ಪಡೆಯದಂತೆ ಸರ್ಕಾರ ಸೂಕ್ತ ಬಂದೋಬಸ್ತು ನಡೆಸಬೇಕು ಎಂದು SDPI ಆಗ್ರಹಿಸಿದೆ.

Join Whatsapp