ಕಾವೇರಿಗಾಗಿ ಜೀವ ಕೊಡಲು ಸಿದ್ಧ: ನಟ ರಾಘವೇಂದ್ರ ರಾಜ್ ಕುಮಾರ್

Prasthutha|

ಬೆಂಗಳೂರು: ಕಾವೇರಿ ಹೋರಾಟದಲ್ಲಿ ಯಾರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕಾವೇರಿಗೆ ಒಳ್ಳೆಯದಾಗುತ್ತದೆ ಎಂದರೆ ನಾನು ಜೀವ ಕೊಡಲು ಸಿದ್ಧನಾಗಿದ್ದೇನೆ ಎಂದು ನಟ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.

- Advertisement -

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹತ್ತು ವರ್ಷಗಳಿಂದ ಕಷ್ಟಪಟ್ಟು ಬದುಕುತ್ತಿದ್ದೇನೆ. ನನ್ನಿಂದ ಕಾವೇರಿ ಒಳ್ಳೆದಾಗತ್ತೆ ಅಂದರೆ, ಜೀವ ಕೊಡಲು ತಯಾರು ಎಂದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಇತ್ತು. ಹಾಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಆಗಿಲ್ಲ ಅನಿಸುತ್ತದೆ. ಅವರ ಕರೆಗಾಗಿ ನಾನು ಕಾದಿದ್ದೇನೆ. ಅವರು ಹೇಳಿದ ತಕ್ಷಣವೇ ಹೋರಾಟಕ್ಕೆ ಇಳಿಯುತ್ತೇವೆ. ನಾನು ಮತ್ತು ನನ್ನ ಕುಟುಂಬ ನಾಡು, ನುಡಿಯ ವಿಚಾರವಾಗಿ ಯಾವತ್ತಿಗೂ ಹೋರಾಟಕ್ಕೆ ಮುಂದು ಎಂದರು.

- Advertisement -

ಬೆಂಗಳೂರಿನ ಹಲವು ಸಂಘಟನೆಗಳು ಮಂಗಳವಾರ ಬೆಂಗಳೂರು ಬಂದ್ ಗೆ ಕರೆಕೊಟ್ಟಿವೆ. ಈ ಸಂದರ್ಭದಲ್ಲಿ ಚಲನಚಿತ್ರ ಕಲಾವಿದರು ಮತ್ತು ತಂತ್ರಜ್ಞರು ಕೂಡ ಬಂದ್ ವೇಳೆ ಭಾಗಿಯಾಗುತ್ತಾರಾ? ಅಥವಾ ಚಿತ್ರರಂಗವೇ ಬೇರೆ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Join Whatsapp