ಹಂಸಲೇಖ ಮುಸ್ಲಿಮರನ್ನು ಮನೆಗೆ ಕರೆಸಿ ಹಂದಿ ಮಾಂಸ ಬಡಿಸಲಿ: ಸಂಸದ ಪ್ರತಾಪ್ ಸಿಂಹ

Prasthutha|

ಉಡುಪಿ: ಹಂಸಲೇಖ ಮುಸ್ಲಿಮರನ್ನು ಮನೆಗೆ ಕರೆಸಿ ಹಂದಿ ಮಾಂಸ ಬಡಿಸಲಿ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

- Advertisement -

ಈ ಬಗ್ಗೆ ಮಾತನಾಡಿದ ಅವರು, ಇದು ಕೇವಲ ಪ್ರಚಾರದ ಹುಚ್ಚಿಗಾಗಿ ಮಾತನಾಡಿದ್ದಾರೆ. ಶ್ರೀಗಳ ಬಗ್ಗೆ ಮಾತನಾಡುವಾಗ ಸ್ವಲ್ಪ ಪರಿಜ್ಞಾನ ಇಟ್ಟುಕೊಂಡು ಮಾತನಾಡಬೇಕು. ಪ್ರಗತಿಪರ ಅನ್ನಿಸಿಕೊಳ್ಳುವ ಗೀಳಿಗೆ ಬಿದ್ದು ಈ ಮಾತು ಬಂದಿದೆ. ಮುಸ್ಲಿಮರನ್ನು ತಮ್ಮ ಮನೆಗೆ ಕರೆಸಿ ಹಂದಿ ಮಾಂಸ ಬಡಿಸಲಿ ಆಗ ನಾನು ಒಪ್ಪುತ್ತೇನೆ ಎಂದು ವಿವಾದಾತ್ಮಕವಾಗಿ ಮಾತನಾಡಿದ್ದಾರೆ.

ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೇಜಾವರ ಸ್ವಾಮೀಜಿ ದಲಿತರ ಕಾಲೋನಿಗಳಿಗೆ ಭೇಟಿ ನೀಡಿ ಅಂತಹ ಕಾಲೋನಿಗಳಲ್ಲಿ ವಾಸ್ತವ್ಯ ಹೂಡಲು ಕೈಗೊಂಡಿರುವ ಉಪಕ್ರಮದ ಬಗ್ಗೆ ಹಂಸಲೇಖ ಪ್ರಸ್ತಾಪಿಸಿದ್ದರು.

- Advertisement -

“ಅಲ್ಲಿಗೆ ಹೋಗಿ ಕುಳಿತುಕೊಳ್ಳುವುದು ಅವರು ಮಾಡಬಹುದಾದ ಅತ್ಯುತ್ತಮ ಕೆಲಸ, ಆದರೆ ಅಲ್ಲಿ ಕೋಳಿ ನೀಡಿದರೆ ತಿನ್ನುತ್ತಾರೆಯೇ ಅಥವಾ ಮಟನ್ ಫ್ರೈ ಅಥವಾ ಲಿವರ್ ಫ್ರೈ ಕೊಟ್ಟರೆ ತಿನ್ನುತಾರೆಯೇ? ದಲಿತರ ಮನೆಗೆ ಭೇಟಿ ನೀಡುವುದು ದೊಡ್ಡ ಸಾಧನೆ ಎಂದು ನಾನು ಭಾವಿಸುವುದಿಲ್ಲ”ಎಂದು ಹೇಳಿದ್ದರು.

ಹಂಸಲೇಖ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಹಂಸಲೇಖಾ ಕ್ಷಮೆ ಯಾಚಿಸಿದ್ದರು.

Join Whatsapp