ಕೇರಳ | ಹಾಡಹಗಲೇ RSS ಕಾರ್ಯಕರ್ತನ ಬರ್ಬರ ಹತ್ಯೆ

Prasthutha|

ಪಾಲಕ್ಕಾಡ್ : ಇಲ್ಲಿನ ಮಂಬರತ್ ಬಳಿ ಇಂದು ಹಾಡಹಗಲೇ RSS ಕಾರ್ಯಕರ್ತನೋರ್ವನನ್ನು ಮಾರಕಾಯುಧಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಮೃತ ಯುವಕನನ್ನು ಎಲಪ್ಪಳ್ಳಿ ನಿವಾಸಿ ಸಂಜಿತ್ ( 27) ಎಂದು ಗುರುತಿಸಲಾಗಿದೆ. ತನ್ನ ಪತ್ನಿಯೊಂದಿಗೆ ಬೆಳಗ್ಗೆ 9ರ ಸುಮಾರಿಗೆ ಸಂಜಿತ್ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿ ಹತ್ಯೆ ಮಾಡಿದೆ.

- Advertisement -


ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ತಂಡ ಬೈಕ್ ನಲ್ಲಿ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದ ಸಂಜಿತ್ ಮೇಲೆ ಏಕಾ ಏಕಿ ದಾಳಿ ನಡೆಸಿ ಕೊಲೆ ನಡೆಸಿದೆ. ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್ ಸಂಜಿತ್, ಎಲಪ್ಪಳ್ಳಿ RSS ಮಂಡಲ ಕಾರ್ಯವಾಹಕನಾಗಿದ್ದ ಎನ್ನಲಾಗಿದೆ.


ಸಾರ್ವಜನಿಕರ ಸಮ್ಮುಖದಲ್ಲೇ ಕೊಲೆ ಕೃತ್ಯ ನಡೆದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಗಂಭೀರ ಗಾಯಗೊಂಡಿದ್ದ ಸಂಜಿತ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆಯ ಹಿಂದೆ ಎಸ್ ಡಿಪಿಐ ಕಾರ್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಹರಿದಾಸ್ ನೇರವಾಗಿ ಆರೋಪಿಸಿದ್ದಾರೆ.

- Advertisement -

ಸಂಜಿತ್ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್ ಆಗಿದ್ದು, ಇತ್ತೀಚೆಗಷ್ಟೆ SDPI ಕಾರ್ಯಕರ್ತನೋರ್ವನಿಗೆ ಹಲ್ಲೆ ನಡೆಸಿ ಬಂಧಿತನಾಗಿ ಜೈಲಿನಿಂದ ಹತ್ತು ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಎಂದು ಪೊಲೀಸ್ ವರದಿ ತಿಳಿಸಿದೆ.

Join Whatsapp