ಖ್ಯಾತ ವಿದ್ವಾಂಸ ಮೌಲಾನಾ ರಹಮತ್ ನದ್ವಿ ಬಿಡುಗಡೆಗೆ ಮುಸ್ಲಿಮ್ ಲೀಗ್ ಒತ್ತಾಯ

Prasthutha|

ಪುಣೆ: ಇತ್ತೀಚೆಗೆ ಮುಂಬೈಯ ಅಮರಾವತಿ ಪೊಲೀಸರಿಂದ ಬಂಧಿತ ಖ್ಯಾತ ವಿದ್ವಾಂಸ, ಸಾಮಾಜಿಕ–ರಾಜಕೀಯ ನೇತಾರ ಮೌಲಾನ ರಹಮತ್ ನದ್ವಿ ಅವರನ್ನು ತಕ್ಷಣ ಬಿಡುಗಡೆಗೊಳಿಸ ಬೇಕೆಂದು ಮುಸ್ಲಿಮ್ ಲೀಗ್ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದೆ.

- Advertisement -

ಮಹಾರಾಷ್ಟ್ರದ ಮುಸ್ಲಿಮ್ ಯೂತ್ ಲೀಗ್ ನ ಸಂಘಟನಾ ಕಾರ್ಯದರ್ಶಿಯಾಗಿರುವ ನದ್ವಿ ಅವರನ್ನು ಅಮರಾಮತಿ ಎಂಬಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.

ಬಂಧಿತ ನದ್ವಿ ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಮಧ್ಯೆ ನೆಟ್ಟಿಗರು ಅಮರಾವತಿ ಪೊಲೀಸರ ನಡೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp