ಅಮಿತ್ ಶಾ ಮೊದಲು ಚೀನಾದ ಮೇಲೆ ಸರ್ಜಿಕಲ್ ದಾಳಿ ನಡೆಸಲಿ : ಅಸಾದುದ್ದೀನ್ ಒವೈಸಿ

Prasthutha|

ಹೈದರಾಬಾದ್ : ಚೀನಾ ಭಾರತದ 970 ಚದರ ಕಿ.ಮೀ. ಭೂಮಿಯನ್ನು ಅತಿಕ್ರಮಿಸಿದೆ. ಮೊದಲು ಅಮಿತ್ ಶಾ ಮೊದಲು ಚೀನಾದ ಮೇಲೆ ಸರ್ಜಿಕಲ್ ದಾಳಿ ನಡೆಸಲಿ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸವಾಲು ಹಾಕಿದ್ದಾರೆ. ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ, ಬಿಜೆಪಿ ನಾಯಕರ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಹೈದರಾಬಾದ್ ನಲ್ಲಿ ಅಕ್ರಮವಾಗಿ ನೆಲೆಸಿದ್ದಾರೆನ್ನಲಾದ ಪಾಕಿಸ್ತಾನಿ, ಅಫ್ಘಾನಿಸ್ತಾನಿ, ಬಾಂಗ್ಲಾದೇಶಿ ವಲಸಿಗರನ್ನು ಹೊರಹಾಕಲು ಸರ್ಜಿಕಲ್ ದಾಳಿ ನಡೆಸಬೇಕು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಒವೈಸಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

- Advertisement -

ನಾನು ಬಿಜೆಪಿಯವರಿಗೆ 24 ಗಂಟೆಗಳನ್ನು ನೀಡುತ್ತೇನೆ. ಹೈದರಾಬಾದ್ ನಲ್ಲಿ ಎಷ್ಟು ಜನ ಪಾಕಿಸ್ತಾನಿಯರು ಇದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ವಾಸಿಸುವವರು ಎಲ್ಲರೂ ಭಾರತೀಯರೇ ಎಂಬುದನ್ನು ಬಿಜೆಪಿ ಅರಿತುಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಹೈದರಾಬಾದ್ ಚುನಾವಣೆಯ ವೇಳೆ ನ.29ರ ವರೆಗೆ ಬಿಜೆಪಿಗೆ ಭಯೋತ್ಪಾದಕರು ಮತ್ತು ಪಾಕಿಸ್ತಾನ ಪದಗಳನ್ನು ಬಳಸದೆ ಚುನಾವಣೆ ನಡೆಸುವ ಸಾಮರ್ಥ್ಯವಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

- Advertisement -