ತಾಕತ್ತಿದ್ದರೆ ಬಿಜೆಪಿ ನನ್ನನ್ನು ಬಂಧಿಸಲಿ, ಜೈಲಿನಿಂದಲೇ ಟಿಎಂಸಿ ಗೆಲ್ಲಿಸುತ್ತೇನೆ : ಮಮತಾ ಬ್ಯಾನರ್ಜಿ
Prasthutha: November 25, 2020

ಬಂಕುರಾ : “ಬಿಜೆಪಿ ಸುಳ್ಳಿನ ಕಸದ ರಾಶಿ” ಮತ್ತು “ದೇಶಕ್ಕೆ ಅಂಟಿದ ದೊಡ್ಡ ಶಾಪ” ಎಂದು ಗುಡುಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮನ್ನು ಬಂಧಿಸುವಂತೆ ಸವಾಲೊಡ್ಡಿದ್ದಾರೆ. ಬಿಜೆಪಿ ತಮ್ಮನ್ನು ಬಂಧಿಸಿದರೂ, ತಾವು ಜೈಲಿನಿಂದಲೇ ಟಿಎಂಸಿಯನ್ನು ಗೆಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.
“ಬಿಜೆಪಿ ಒಂದು ರಾಜಕೀಯ ಪಕ್ಷವಲ್ಲ, ಅದು ಸುಳ್ಳಿನ ಕಸದ ರಾಶಿ. ಚುನಾವಣೆ ಹತ್ತಿರಬಂದಾಗಲೆಲ್ಲಾ, ಅದು ಟಿಎಂಸಿ ನಾಯಕರನ್ನು ಬೆದರಿಸಲು ನಾರದಾ ಮತ್ತು ಸಾರಧಾ ಹಗರಣಗಳ ವಿಷಯ ಮುನ್ನೆಲೆಗೆ ತರುತ್ತದೆ’’ ಎಂದು ಅವರು ಹೇಳಿದ್ದಾರೆ.
“ಆದರೆ, ನಾನು ಅವರಿಗೆ ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ಬಿಜೆಪಿ ಅಥವಾ ಅದರ ಏಜೆನ್ಸಿಗಳಿಗೆ ನಾನು ಹೆದರುವುದಿಲ್ಲ. ಅವರಿಗೆ ತಾಕತ್ತಿದ್ದರೆ, ಅವರು ನನ್ನನ್ನು ಬಂಧಿಸಿ ಜೈಲಿನಲ್ಲಿಡಲಿ. ನಾನು ಜೈಲಿನಿಂದಲೇ ಚುನಾವಣೆ ಎದುರಿಸುತ್ತೇನೆ ಮತ್ತು ಟಿಎಂಸಿಯ ಗೆಲವುನ್ನು ಸಾಧಿಸುತ್ತೇನೆ’’ ಎಂದು ಅವರು ಹೇಳಿದ್ದಾರೆ.
