ಕಾಂಗ್ರೆಸ್ ಶಾಸಕರ ಮನೆಯ ಸುತ್ತ ಚಿರತೆ ಕಾಟ, ವಿಧಾನ ಸಭೆಯಲ್ಲಿ ಪ್ರಸ್ತಾಪ

Prasthutha|

ಬೆಂಗಳೂರು: ನನ್ನ ಮನೆಯ ಸುತ್ತ ಎಂಟು ದಿನಗಳಿಂದ ಚಿರತೆ ಓಡಾಡುತ್ತಿದೆ ಅದನ್ನು ಹಿಡಿದು ದೂರ ಬಿಡುವಂತೆ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಅವರು ಸದನದಲ್ಲಿ ಶೂನ್ಯ ವೇಳೆಯಲ್ಲಿ ಪರಿಪರಿಯಾಗಿ ಮನವಿ ಮಾಡಿದ ಪ್ರಸಂಗ ನಡೆದಿದೆ.
ಈಗಾಗಲೇ ಈ ಚಿರತೆ ಕುರಿ, ಆಡುಗಳನ್ನು ಹೊತ್ತೊಯ್ದಿದೆ. ಹುಬ್ಬಳ್ಳಿಯ ನೃಪತುಂಗ ಗುಡ್ಡದ ಬಳಿ ಚಿರತೆಗಳು ಓಡಾಡುತ್ತಿದ್ದು ಜನರನ್ನು ಭಯಕ್ಕೆ ಬೀಳಿಸಿವೆ. ನನ್ನ ಮನೆಯೂ ಅಲ್ಲಿಯೇ ಇರುವುದಾಗಿ ಶಾಸಕ ಅಬ್ಬಯ್ಯ ಪ್ರಸಾದ್ ವಿಧಾನ ಸಭೆಯಲ್ಲಿ ಮನವಿ ಮಾಡಿದರು.

- Advertisement -


ಮಾಜೀ ಸಚಿವ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ ಸುತ್ತ ಚಿರತೆ ಕಾಟ ಅತಿಯಾಗಿದೆ. ಬೇಗ ಪರಿಹಾರ ಅಗತ್ಯ ಎಂದರು.
ಸಚಿವ ಕಾರಜೋಳ ಅವರು ಚಿರತೆ ಹಿಡಿದು ದೂರ ಬಿಡಲು ಈಗಾಗಲೇ ಅರಣ್ಯ ಇಲಾಖೆಯವರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಉತ್ತರಿಸಿದರು.



Join Whatsapp