ಬಿಹಾರದ “ಹರ್ ಘರ್ ನಲ್ ಕಾ ಜಲ್” ಯೋಜನೆಯಲ್ಲಿ ಬಿಜೆಪಿಯ ಸ್ವಲಾಭ

Prasthutha|

ಪಾಟ್ನ: ಐದು ವರ್ಷಗಳ ಹಿಂದೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು “ ಹರ್ ಘರ್ ನಲ್ ಕಾ ಜಲ್” ಎಂಬ ಕುಡಿಯುವ ನೀರಿನ ಯೋಜನೆ ಆರಂಭಿಸಿದ್ದರು. ಅದು ಬಹುಪಾಲು ಯಶಸ್ವಿಯೂ ಆಗಿದೆ. ಆದರೆ ಅದನ್ನು ಉಪ ಮುಖ್ಯಮಂತ್ರಿ ಬಿಜೆಪಿಯ ತಾರಕಿಶೋರ್ ಪ್ರಸಾದ್ ತನ್ನ ಸ್ವಂತಕ್ಕೆ ದುರುಪಯೋಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

- Advertisement -


1.08 ಲಕ್ಷ ಪಂಚಾಯತ್ ವಾರ್ಡ್ ಗಳು ಇದರ ಲಾಭ ಪಡೆದಿವೆ. ಇದನ್ನು ಜಾರಿಗೆ ತರುವ ರೂ.53 ಕೋಟಿ ರೂಪಾಯಿಯ ವ್ಯವಹಾರ ಉಪಮುಖ್ಯಮಂತ್ರಿಗಳ ಕುಟುಂಬದೊಳಗೆ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜೆಡಿಯು ಮತ್ತು ಬಿಜೆಪಿಗಳು ನಾನಾ ಸರಕಾರಿ ಯೋಜನೆಗಳ ಜಾರಿಯ ಲಾಭವನ್ನು ತಮ್ಮತಮ್ಮೊಳಗೆ ಹಂಚಿಕೊಂಡಿರುವುದು ತಿಳಿದು ಬಂದಿದೆ.


ಕೇಂದ್ರ ಸರಕಾರವು ಇತ್ತೀಚೆಗೆ ಇಲ್ಲಿ ತನ್ನ ಜಲ ಜೀವನ್ ಮಿಶನ್ ಜಾರಿಗೆ ತಂದಿದೆ. ಹರ್ ಘರ್ ನಲ್ ಕಾ ಜಲ್ ಯೋಜನೆಯ ಹೆಸರನ್ನೂ ಕೇಂದ್ರದ ಪರ ಬಳಸಿಕೊಂಡಿರುವ ಬಿಜೆಪಿಗರು ಜಲ್ ಜೀವನ್ ಮಿಶನ್ ನಿಧಿಗೆ ಕನ್ನ ಹಾಕಿದ್ದಾರೆ ಎಂದು ಗೊತ್ತಾಗಿದೆ. ಬಿಹಾರ ದಲ್ಲಿ ನೀರು ಬಳಕೆಯಲ್ಲಿ ನಾಲ್ಕನೇ ರಾಜ್ಯವಾಗಿ ಮುನ್ನಡೆ ಕಂಡಿದೆಯಾದರೂ ಅದರ ಜಾರಿಯಲ್ಲಿ ಹಲವು ಕೋಟಿ ರೂ. ರಾಜಕೀಯದವರ ನಡುವೆಯೇ ಹಂಚಿಕೆಯಾಗಿದೆ. ಪಂಚಾಯತ್ ರಾಜ್, ನಗರಾಭಿವೃದ್ಧಿ ಇಲಾಖೆ, ಬಿಹಾರ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ ಎಂದು ಹರ್ ಘರ್ ನಲ್ ಕಾ ಜಲ್ ಯಶಸ್ಸು ಕಂಡ ಮೇಲೆ ಕೇಂದ್ರದ ಜಲ್ ಜೀವನ್ ಮಿಶನ್ ತಂದು ಹಿಂದೆ ತಿಂದಿದ್ದೂ ಅಲ್ಲದೆ, ಹಳೆಯದಕ್ಕೂ ಹೊಸ ಬಿಲ್ ಮಾಡುವ ತಂತ್ರ ಬಯಲಾಗಿದೆ ಎಂದು ದೇಶೀಯ ಇಂಗ್ಲಿಷ್ ಪತ್ರಿಕೆಯೊಂದು ವರದಿ ಮಾಡಿದೆ.

Join Whatsapp