ಲೆಜೆಂಡ್ಸ್ ಲೀಗ್ ಫೈನಲ್‌| ಇಂಡಿಯಾ ಕ್ಯಾಪಿಟಲ್ಸ್ vs ಭಿಲ್ವಾರಾ ಕಿಂಗ್ಸ್ ಮುಖಾಮುಖಿ

Prasthutha|

ಜೈಪುರ:‌ ವಿಶ್ವದ  ದಿಗ್ಗಜ ಕ್ರಿಕೆಟ್‌ ಆಟಗಾರರ ಭಾಗವಹಿಸುವಿಕೆಯೊಂದಿಗೆ ಗಮನ ಸೆಳೆದಿದ್ದ ʻಲೆಜೆಂಡ್ಸ್ ಲೀಗ್-2022ʼ ಟೂರ್ನಿಯ ಎರಡನೇ ಆವೃತ್ತಿಯ ಫೈನಲ್‌ ಪಂದ್ಯವು ಬುಧವಾರ ನಡೆಯಲಿದೆ.

- Advertisement -

ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ  ಇರ್ಫಾನ್ ಪಠಾಣ್ ಸಾರಥ್ಯದ ಭಿಲ್ವಾರಾ ಕಿಂಗ್ಸ್, ಗೌತಮ್ ಗಂಭೀರ್  ನಾಯಕನಾಗಿರುವ ಇಂಡಿಯಾ ಕ್ಯಾಪಿಟಲ್ಸ್ ತಂಡದ ಸವಾಲನ್ನು ಎದುರಿಸಲಿದೆ.

ಭಾನುವಾರ ನಡೆದಿದ್ದ ಕ್ವಾಲಿಫೈಯರ್‌-1 ಪಂದ್ಯದಲ್ಲಿ ಉಭಯ ತಂಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಇಂಡಿಯಾ ಕ್ಯಾಪಿಟಲ್ಸ್ 4 ವಿಕೆಟ್‌ ಅಂತರದಲ್ಲಿ ಗೆದ್ದು, ಮೊದಲ ತಂಡವಾಗಿ ಫೈನಲ್‌ ಪ್ರವೇಶಿಸಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಭಿಲ್ವಾರಾ ಕಿಂಗ್ಸ್, 5 ವಿಕೆಟ್‌ ನಷ್ಟದಲ್ಲಿ 226 ರನ್‌ಗಳಿಸತ್ತು. ಕಠಿಣ ಗುರಿ ಚೇಸ್‌ ಮಾಡಿದ ಕ್ಯಾಪಿಟಲ್ಸ್‌, ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತ್ತು.

- Advertisement -

ಟೂರ್ನಿಯಲ್ಲಿ ಗರಿಷ್ಠ ರನ್‌ಗಳಿಸಿರುವ ವಿಲಿಯಂ ಪೋರ್ಟರ್‌ಫೀಲ್ಡ್ ಮತ್ತು ವಿಕೆಟ್‌ ಗಳಿಕೆಯಲ್ಲಿ ಮುಂಚೂಣಿಯಲ್ಲಿರುವ  ಫಿಡೆಲ್ ಎಡ್ವರ್ಡ್ಸ್ ಭಿಲ್ವಾರಾ ಕಿಂಗ್ಸ್ ತಂಡದಲ್ಲಿದ್ದಾರೆ. ಐರ್ಲೆಂಡ್‌ನ ಮಾಜಿ ನಾಯಕ ಪೋರ್ಟರ್‌ಫೀಲ್ಡ್ 6 ಪಂದ್ಯಗಳಿಂದ 255 ರನ್ ಗಳಿಸಿದ್ದಾರೆ.  ಮತ್ತೊಂದೆಡೆ ಎಡ್ವರ್ಡ್ಸ್ 7 ಪಂದ್ಯಗಳಿಂದ 10 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ ಮತ್ತು ಭಾರತದ ಮಾಜಿ ಆಲ್‌ರೌಂಡರ್ ಯೂಸುಫ್ ಪಠಾಣ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಒಟ್ಟು 4 ಕೋಟಿ ಬಹುಮಾನ

 ಲೆಜೆಂಡ್ಸ್ ಲೀಗ್ ಟೂರ್ನಿಯ ವಿಜೇತರು 2 ಕೋಟಿ ನಗದು ಬಹುಮಾನ ಪಡೆಯಲಿದ್ದು, ರನ್ನರ್‌ಅಪ್‌ ತಂಡ 1 ಕೋಟಿ ಪಡೆಯಲಿದೆ. ಎರಡನೇ ರನ್ನರ್‌ಅಪ್‌ ಗುಜರಾತ್‌ ಜೈಂಟ್ಸ್‌ಗೆ 50 ಲಕ್ಷ ನಗದು ಪಡೆಯಲಿದೆ.



Join Whatsapp