ಸಿಕ್ಸರ್-ಬೌಂಡರಿ ಬಾರಿಸುವುದನ್ನು ಹತ್ತಿರದಿಂದ ನೋಡಲು ಹಾವು ಮೈದಾನವನ್ನು ಪ್ರವೇಶಿಸಿತ್ತು: ಎಸಿಎ ಕಾರ್ಯದರ್ಶಿ ವಿಚಿತ್ರ ಹೇಳಿಕೆ

Prasthutha|

ಗುವಾಹಟಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು 2-1 ಅಂತರದಲ್ಲಿ ರೋಹಿತ್‌ ಶರ್ಮಾ ವಶಪಡಿಸಿಕೊಂಡಿತ್ತು. ಆಮೂಲಕ ಇದೇ ಮೊದಲ ಬಾರಿಗೆ ತಾಯ್ನೆಲದಲ್ಲಿ ಹರಿಣಗಳ ವಿರುದ್ಧ ಟಿ20 ಸರಣಿ ಗೆದ್ದ ಸಾಧನೆ ಮಾಡಿತ್ತು.   

- Advertisement -

ಗುವಾಹಟಿಯಲ್ಲಿನ ಬರ್ಸಪರ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಭಾನುವಾರ ನಡೆದಿದ್ದ ನಿರ್ಣಾಯಕ  ಎರಡನೇ ಟಿ20 ಪಂದ್ಯದ ನಡುವೆ ಹಾವೊಂದು ಮೈದಾನಕ್ಕೆ ನುಗ್ಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 7 ಓವರ್‌ ಕಳೆಯುವಷ್ಟರಲ್ಲಿ ಭಾರತ ವಿಕೆಟ್‌ ನಷ್ಟವಿಲ್ಲದೆ 68 ರನ್‌ ಗಳಿಸಿತ್ತು. ಈ ವೇಳೆ ಮೈದಾನದಲ್ಲಿ ಹಾವೊಂದು ಪ್ರವೇಶಿಸಿತ್ತು. ಹಾವನ್ನು ಗಮನಿಸಿದ ದಕ್ಷಿಣ ಆಫ್ರಿಕದ ಕೆಲವು ಆಟಗಾರರು ಕೂಡಲೇ ಕೆ.ಎಲ್.ರಾಹುಲ್ ಮತ್ತು ಫೀಲ್ಡ್​ನಲ್ಲಿದ್ದ ಅಂಪೈರ್​ ಗಮನಕ್ಕೆ ತಂದರು. ಆತಂಕದ ವಾತಾವರಣ ಸೃಷ್ಟಿಯಾಗಿ, ಕೆಲಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಕೂಡಲೇ ಮೈದಾನದ ಸಿಬ್ಬಂದಿ ಸಲಕರಣೆಯೊಂದಿಗೆ ಆಗಮಿಸಿ ಹಾವನ್ನು ಚೀಲದಲ್ಲಿ ತುಂಬಿ ಕೊಂಡೊಯ್ದ ಬಳಿಕ ಪಂದ್ಯವನ್ನು ಮುಂದುವರಿಸಲಾಗಿತ್ತು.

ಆದರೆ ಈ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಅಸ್ಸಾಂ ಕ್ರಿಕೆಟ್​ ಅಸೋಸಿಯೇಷನ್​ (ಎಸಿಎ) ಕಾರ್ಯದರ್ಶಿ ದೇವಜಿತ್ ಸೈಕಿಯಾ, ಹಾವು ಪಂದ್ಯವನ್ನು ನೋಡಿ ಆನಂದಿಸಿದೆ. ಆಟಗಾರರು ರನ್ ಗಳಿಸುವುದನ್ನು, ಸಿಕ್ಸ್‌, ಬೌಂಡರಿ ಬಾರಿಸುವುದನ್ನು ಹತ್ತಿರದಿಂದ ನೋಡಲು ಹಾವು ಮೈದಾನವನ್ನು ಪ್ರವೇಶಿಸಿರಬಹುದು. ಪಿಚ್‌ ಕ್ಯುರೇಟಿಂಗ್ ಸದಸ್ಯರಲ್ಲಿ ಒಬ್ಬರು ಸ್ವಲ್ಪ ಸಮಯದಲ್ಲೇ ಕಾರ್ಯಾಚರಣೆಗೆ ಇಳಿದಾಗ ಹಾವು ಅಸಮಾಧಾನಗೊಂಡಿರಬೇಕು ಮತ್ತು ಅದನ್ನು ಹಿಡಿದು ಆಟದ ಮೈದಾನದಿಂದ ಹೊರಗೆ ಹಾಕಿದರು, ”ಎಂದು ಗಂಭಿರದ ವಿಚಾರದ ಕುರಿತು ಸೈಕಿಯಾ ಲಘುವಾಗಿ ಪ್ರತಿಕ್ರಯಿಸಿದ್ದಾರೆ.

- Advertisement -

ಎಸಿಎ ಕಾರ್ಯದರ್ಶಿ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೈದಾನಕ್ಕೆ ಹಾವು ನುಗ್ಗುವುದೆಂದರೆ, ತಮಾಷೆ ಮಾತಲ್ಲ. ಗಂಭೀರವಾಗಿ ಪರಿಗಣಿಸಿ ಎಂದು ಹಲವರು ಸಲಹೆ ನೀಡಿದ್ದಾರೆ. ಮೂರು ವರ್ಷಗಳ ಬಳಿಕ ಗುವಾಹಟಿಯಲ್ಲಿನ ಬರ್ಸಪರ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಿತ್ತು.

Join Whatsapp