ಕುಂಜತ್ತೂರು ನ್ಯೂ ಸ್ಟಾರ್ ಫ್ರೆಂಡ್ಸ್ ಕ್ಲಬ್ ನೂತನ ಕ್ಲಬ್ ಲೋಕಾರ್ಪಣೆ

Prasthutha|

ಮಂಜೇಶ್ವರ: ಕೇರಳ-ಕರ್ನಾಟಕದ ಗಡಿ ಪ್ರದೇಶದ ಸಪ್ತ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದ ಕುಂಜತ್ತೂರಿನಲ್ಲಿ ಕಳೆದ ಕೆಲವು ದಶಕಗಳಿಂದ ಜಿಲ್ಲೆ ಹಾಗೂ ಹೊರಭಾಗದಲ್ಲಿ ವಿವಿಧ ಪಂದ್ಯಾವಳಿಗಳಲ್ಲಿ ಚಾಂಪಿಯನ್ಸ್  ಆಗಿರುವ ನ್ಯೂ ಸ್ಟಾರ್ ಕುಂಜತ್ತೂರು ಫ್ರೆಂಡ್ಸ್ ಕ್ಲಬ್ ನ ನೂತನ ಕ್ಲಬ್ ಮಾಸ್ಕೋ ಸಭಾಂಗಣ ಮುಂಭಾಗದ ಪಾವೂರು ಕಾಂಪ್ಲೆಕ್ಸ್ ಕಟ್ಟಡದಲ್ಲಿ ಆದಿತ್ಯವಾರ ಲೋಕಾರ್ಪಣೆಗೊಂಡಿತು.

- Advertisement -

ಕ್ಲಬ್ ಅಧ್ಯಕ್ಷ ಮುನೀರ್ ಅವರು, ಸರ್ವ ಸದಸ್ಯರ ಹಾಗೂ ಊರವರ ಸಮ್ಮುಖದಲ್ಲಿ ನೂತನ ಕ್ಲಬ್ ಉದ್ಘಾಟಿಸಿದರು.

ಈ ಸಂದರ್ಭ ಕ್ಲಬ್ ಪದಾಧಿಕಾರಿಗಳು, ಊರ ಮಹನೀಯರು ಹಿರಿಯರು, ಯುವಕರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡರು.

- Advertisement -

ಸಮಾಜ ಸೇವೆ ಹಾಗೂ ಜೀವ ಕಾರುಣ್ಯ ಚಟುವಟಿಕೆಗಳಲ್ಲಿ ಈ ಕ್ಲಬ್ ಸದಸ್ಯರ ಸೇವೆ ಜಿಲ್ಲೆಯಲ್ಲೇ ಗಮನ ಸೆಳೆದಿದೆ.

Join Whatsapp