ಹತಾಶೆಯಲ್ಲಿರುವ ವಿಪಕ್ಷಗಳು ಫೇಕ್ ಫ್ಯಾಕ್ಟರಿಗಳಿಗೆ ಕೆಲಸಕೊಟ್ಟಿವೆ : ಕಾಂಗ್ರೆಸ್ ಆಕ್ರೋಶ

Prasthutha|

ಬೆಂಗಳೂರು: ಆಳಂದ ಶಾಸಕ ಬಿಆರ್ ಪಾಟೀಲ್ ಕಲಬುರಗಿ ಉಸ್ತುವಾರಿ ಸಚಿವರ ವಿರುದ್ಧ ಆರೋಪ ಮಾಡಿದ್ದಾರೆ ಎನ್ನಲಾದ ವರದಿ ಮತ್ತು ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ಚಿತ್ರೀಕರಣ ವಿಚಾರವಾಗಿ ಪ್ರತಿಪಕ್ಷಗಳ ವಿರುದ್ಧ ಅಡಳಿತಾರೂಢ ಕಾಂಗ್ರೆಸ್ ಕಿಡಿ ಕಾರಿದೆ.

- Advertisement -

ಸೋಲಿನ ಹತಾಶೆಯಲ್ಲಿರುವ ಪ್ರತಿಪಕ್ಷಗಳು ಫೇಕ್ ಫ್ಯಾಕ್ಟರಿಗಳಿಗೆ ಕೆಲಸಕೊಟ್ಟಿವೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ಸೋಲಿನ ಹತಾಶೆಯಲ್ಲಿರುವ ಬಿಜೆಪಿ ಫೇಕ್ ಫ್ಯಾಕ್ಟರಿ ಹೊಸ ಹೊಸ ಟೂಲ್ ಕಿಟ್ ತಯಾರು ಮಾಡುತ್ತಿದೆ, ಅದರ ಭಾಗವಾಗಿ ಉಡುಪಿಯ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಎಂದು ನಕಲಿ ಸುದ್ದಿಯ ಸ್ಕ್ರಿಪ್ಟ್ ತಯಾರಿಸಿದೆ. ಯಾವುದೇ ದೂರು ದಾಖಲಾಗದಿದ್ದರೂ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಯಾವುದೇ ವಿಡಿಯೋ ಚಿತ್ರೀಕರಿಸಿ ಹರಿಬಿಟ್ಟಿರುವುದು ಪತ್ತೆಯಾಗಿಲ್ಲ. ಬಿಜೆಪಿಯ ಫೇಕ್ ಫ್ಯಾಕ್ಟರಿಯ ಸದಸ್ಯೆ ಸೃಷ್ಟಿಸಿದ ಸುಳ್ಳನ್ನೇ ಹಿಡಿದು ಜಗ್ಗಾಡುತ್ತಿರುವ ಕರ್ನಾಟಕ ಬಿಜೆಪಿ ನಾಯಕರ ಹತಾಶೆಯು ಮಿತಿಮೀರಿ ಕಟ್ಟೆಯೊಡೆದಿರುವುದಕ್ಕೆ ಈ ವಿಷಯವೇ ಸಾಕ್ಷಿ! ಎಂದು ಕಾಂಗ್ರೆಸ್ ಟೀಕಿಸಿದೆ.

- Advertisement -

ಉಡುಪಿಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಎಂದು ನಕಲಿ ಸುದ್ದಿ ಸೃಷ್ಟಿಸಿ ಕೋಮು ಪ್ರಚೋದನೆಗೆ ಮುಂದಾಗಿರುವ ಬಿಜೆಪಿ ತೀರ್ಥಹಳ್ಳಿಯಲ್ಲಿ ಹಿಂದೂ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ಎಬಿವಿಪಿ ಅಧ್ಯಕ್ಷನ ಅಸಲಿ ಸುದ್ದಿಯ ಬಗ್ಗೆ ಮೌನ ಮುರಿಯುವುದು ಯಾವಾಗ? ವಿದ್ಯಾರ್ಥಿನಿಯರ ಮಕ್ಕಳಾಟವನ್ನು ರಾಜಕೀಯದ ಕಳ್ಳಾಟಕ್ಕೆ ಬಳಸಿಕೊಳ್ಳಲು ಉಪ್ಪು ಖಾರ, ಮಸಾಲೆಗಳನ್ನು ಬೆರಸಿ ಚಪ್ಪರಿಸಲು ಹೊರಟಿದ್ದ ಕರ್ನಾಟಕ ಬಿಜೆಪಿಗೆ ನಮ್ಮ ದಕ್ಷ ಪೊಲೀಸರು ತಡಮಾಡದೆ ತನಿಖೆ ಮಾಡಿ ಸತ್ಯಾಂಶ ಬಯಲಿಗೆಳೆದು ನಿರಾಸೆ ಮೂಡಿಸಿದ್ದಾರೆ ಎಂದು ಕಾಂಗ್ರೆಸ್ ಉಲ್ಲೇಖಿಸಿದೆ.

ಐದು ಉಚಿತ ಗ್ಯಾರಂಟಿಗಳ ಜಾರಿ ಮಾಡಿದ ಕಾಂಗ್ರೆಸ್‌ ಸರ್ಕಾರಕ್ಕೆ ಸಿಗುತ್ತಿರುವ ಜನಮೆಚ್ಚುಗೆಯನ್ನು ಸಹಿಸಲಾಗದೆ ಪ್ರತಿಪಕ್ಷಗಳು ನಕಲಿ ಸೃಷ್ಟಿಯ ಮೊರೆ ಹೋಗಿವೆ. ಶಾಸಕರ ಹಳೇ ಲೆಟರ್‌ಹೆಡ್‌ನಲ್ಲಿ ನಕಲಿ ಪತ್ರ ಸೃಷ್ಟಿಸಲಾಗಿದೆ ಎಂದು ಆಳಂದ ಶಾಸಕ ಬಿಆರ್ ಪಾಟೀಲ್ ಪತ್ರದ ವಿಚಾರವಾಗಿ ಆಡಳಿತಾರೂಢ ಪಕ್ಷ ಪ್ರತಿಕ್ರಿಯಿಸಿದೆ.

Join Whatsapp