ಫರಂಗಿಪೇಟೆ: ಮುಅಲ್ಲಿಂ ಡೇ ಆಚರಣೆ ಮತ್ತು ಗಿಫ್ಟ್ ವಿತರಣೆ

Prasthutha|

ಫರಂಗಿಪೇಟೆ: ರೇಂಜ್ ಮೇನೆಜ್ಮೆಂಟ್ ಎಸೋಸಿಯೇಷನ್ ಹಾಗೂ ಜಂಇಯ್ಯತುಲ್ ಮುಅಲ್ಲಿಮೀನ್ ಜಂಟಿ ಆಶ್ರಯದಲ್ಲಿ ಮುಅಲ್ಲಿಮ್ ಡೇ ಆಚರಣೆ ಮತ್ತು ಮುಅಲ್ಲಿಮರಿಗೆ ಗಿಫ್ಟ್ ನೀಡುವ ಕಾರ್ಯಕ್ರಮ ಫರಂಗಿಪೇಟೆಯ ಕೇಂದ್ರ ಮಸೀದಿಯಲ್ಲಿ ನಡೆಯಿತು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇಂಜ್ ಮದ್ರಸ ಮೆನೇಜ್ಮೆಂಟ್ ಎಸೋಸಿಯೇಷನ್ ಅಧ್ಯಕ್ಷ ಎಸ್.ಹಸನಬ್ಬ ವಹಿಸಿದರು, ಮುಫತ್ತಿಶ್ ಕೆ. ಎಲ್. ಉಮರ್ ದಾರಿಮಿ, ತುಂಬೆ ಮಸೀದಿ ಖತೀಬ್ ಅಬೂಸಾಲಿ ಫೈಝಿ, ಫರಂಗಿಪೇಟೆ ಮಸೀದಿ ಅಧ್ಯಕ್ಷ ಉಮರ್ ಫಾರೂಕ್ ಈ ಸಂದರ್ಭದಲ್ಲಿ ಮಾತನಾಡಿದರು.

ರೇಂಜ್ ಮೆನೇಜ್ಮೆಂಟ್ ಪ್ರಧಾನ ಕಾರ್ಯದರ್ಶಿ ಸಲೀಂ ಕುಂಪನಮಜಲ್, ಜಂಇಯ್ಯತುಲ್ ಮುಹಲ್ಲಿಮೀನ್ ರೇಂಜ್ ಅಧ್ಯಕ್ಷ ಸಿದ್ದೀಕ್ ದಾರಿಮಿ ಸ್ವಾಗತಿಸಿ ಕಾಸಿಂ ಅರ್ಷದಿ ಧನ್ಯವಾದಗೈದರು

Join Whatsapp