ಇಂದು ಏಪ್ರಿಲ್ ಎರಡಾದರೂ ಮೋದಿ ಜನರನ್ನು ಮೂರ್ಖರನ್ನಾಗಿಸುವುದನ್ನು ನಿಲ್ಲಿಸಲಿಲ್ಲ : ಟ್ಟೀಟ್ ಮೂಲಕ ವ್ಯಂಗ್ಯವಾಡಿದ ಕುನಾಲ್ ಕಮ್ರಾ

Prasthutha|

ಹೊಸದಿಲ್ಲಿ : ಮೂರ್ಖರ ದಿನ ಕಳೆದು ಇಂದು ಎಪ್ರಿಲ್ ಎರಡಾದರೂ ಮೋದಿ ಜನರನ್ನು ಮೂರ್ಖರನ್ನಾಗಿಸುವುದನ್ನು ನಿಲ್ಲಿಸಲಿಲ್ಲ ಎಂದು ಮೋದಿಯನ್ನು ಅಪಹಾಸ್ಯ ಮಾಡಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಟ್ವೀಟ್ ಮಾಡಿದ್ದಾರೆ.

 ಏಪ್ರಿಲ್ 1 ರಂದು ನಿನ್ನೆ ಕುನಾಲ್ ಅವರು ಮೋದಿಯವರನ್ನು ತೀವ್ರವಾಗಿ ಟೀಕಿಸಿದ್ದರು. ಏಳು ವರ್ಷಗಳಿಂದ ದೇಶದಲ್ಲಿ ಪ್ರತಿದಿನ ಏಪ್ರಿಲ್ 1 ಎಂದು ನಿನ್ನೆ ಅವರು ಟ್ವೀಟ್ ಮಾಡಿದ್ದರು. ಮೋದಿ ಅಧಿಕಾರ ವಹಿಸಿಕೊಂಡಾಗಿನಿಂದ ಅವರು ದೇಶದ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಕುನಾಲ್ ಕಮ್ರಾ ಟೀಕಿಸಿದ್ದಾರೆ. ಇಂಧನ ಬೆಲೆ ಏರಿಕೆಯ ವಿರುದ್ಧದ ಮೋದಿಯವರ ಹಳೆಯ ಟ್ವೀಟ್‌ಗಳು ಮತ್ತು ಇತರ ಭರವಸೆಗಳನ್ನು ಒಳಗೊಂಡಿರುವ ಟ್ರೋಲ್ ವಿಡಿಯೋವನ್ನು ಟ್ವಿಟರ್‌ನಲ್ಲಿ ಅವರು ಹಂಚಿಕೊಂಡಿದ್ದಾರೆ.

- Advertisement -