ಮಂಗಳೂರು | ಸಿಡಿಲು ಬಡಿದು ಗಂಭೀರಾವಸ್ಥೆಯಲ್ಲಿದ್ದ ಮತ್ತೋರ್ವ ಬಾಲಕನೂ ಮೃತ !
Prasthutha: April 22, 2021

ಎಪ್ರಿಲ್ 20 ರಂದು ಸಂಜೆ ಹಳೆಯಂಗಡಿ ಬಳಿ ಸಿಡಿಲು ಬಡಿದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮತ್ತೋರ್ವ ಬಾಲಕನೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಮೃತ ಬಾಲಕನನ್ನು ಗಂಗಾವತಿ ಮೂಲದ ದುರ್ಗಪ್ಪ ಎಂಬವರ ಪುತ್ರ ಮಾರುತಿ(6) ಎಂದು ಗುರುತಿಸಲಾಗಿದೆ.
ಎಪ್ರಿಲ್ 20ರಂದು ಸಂಜೆ ಹಳೆಯಂಗಡಿ ಇಂದಿರಾ ನಗರ ಬೊಳ್ಳೂರು ಮಸೀದಿ ಹಿಂಭಾಗದಲ್ಲಿರುವ ಮನೆಯ ಮುಂಭಾಗ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ಸಿಡಿಲು ಬಡಿದು ನಿಹಾನ್ ಹಾಗೂ ಮಾರುತಿ ಎಂಬ ಹೆಸರಿನ ಇಬ್ಬರು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಸಿಡಿಲಾಘಾತಕ್ಕೊಳಗಾಗಿದ್ದ ಹೆಜಮಾಡಿ ನಿವಾಸಿ ಮನ್ಸೂರ್ ಎಂಬವರ ಪುತ್ರ ನಿಹಾನ್(5) ಮರುದಿನ ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಇದೀಗ ಎರಡನೇ ಬಾಲಕನೂ ಮೃತಪಟ್ಟಿದ್ದಾನೆ.
