ಹೈದರಾಬಾದ್: ಮೇದಕ್ ಸಂಸದ ಹಾಗೂ ದುಬ್ಬಾಕ ಬಿಆರ್ಎಸ್ ಅಭ್ಯರ್ಥಿ ಕೊತ್ತಾ ಪ್ರಭಾಕರ ರೆಡ್ಡಿಗೆ ಚಾಕುವಿನಿಂದ ಇರಿಯಲಾಗಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಚೂರಿ ಹಾಕಿದ ವ್ಯಕ್ತಿ ಕಾಂಗ್ರೆಸ್ ಪಕ್ಷದ ಮುಖಂಡ ಎಂದು ಸಚಿವ ಕೆಟಿಆರ್ ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳನ್ನೂ ಬಿಡುಗಡೆ ಮಾಡಿದ್ದಾರೆ. ಆರೋಪಿ ಕಾಂಗ್ರೆಸ್ ಸ್ಕಾರ್ಫ್ ಧರಿಸಿ ಭಾಷಣ ಮಾಡುತ್ತಿರುವ ಹಲವು ಫೋಟೋಗಳನ್ನು ಕೆಟಿಆರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಕೊತ್ತ ಪ್ರಭಾಕರ ರೆಡ್ಡಿ ಮೇಲೆ ಹಲ್ಲೆ ನಡೆಸಿದ ಆರೋಪಿ ಕಾಂಗ್ರೆಸ್ ಗೂಂಡಾ ಎಂದು, ಪಕ್ಷದ ಸ್ಕಾರ್ಫ್ ಧರಿಸಿರುವ ಫೋಟೋಗಳನ್ನು ಹಲವು ಬಿಆರ್ಎಸ್ ಕಾರ್ಯಕರ್ತರು ಪೋಸ್ಟ್ ಮಾಡಿದ್ದಾರೆ. ಇನ್ನು ನಿಮಗೆ ಸಾಕ್ಷಿ ಏನು ಬೇಕು ಎಂದು ರಾಹುಲ್ ಗಾಂಧಿಗೆ ಸಚಿವ ಕೆಟಿಆರ್ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಸೋಮವಾರ ಮಧ್ಯಾಹ್ನ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಸಂಸದ ಕೊತ್ತಾ ಪ್ರಭಾಕರ್ ರೆಡ್ಡಿಯವರಿಗೆ ಚೂರಿ ಇರಿತ ನಡೆದಿದ್ದು ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಈ ಮಧ್ಯೆ ವಿಷಯವನ್ನು ರಾಜಕೀಯ ಮುಖಂಡರು ತಮ್ಮ ಪ್ರಚಾರದಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ದಾಳಿಯನ್ನು ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಖಂಡಿಸಿವೆ.
ಘಟನೆಯ ಯಾವುದೋ ಪಕ್ಷದವರು ಅಥವಾ ಯಾವ ವ್ಯಕ್ತಿಯ ಕೈವಾಡವಿದೆ ಎಂಬ ದೃಷ್ಟಿಯಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದುಬ್ಬಾಕ ಶಾಸಕ ರಘುನಂದನ್ ರಾವ್ ತಮ್ಮ ಮೇಲೆ ಬಂದ ಆರೋಪವನ್ನು ನಿರಾಕರಿಸಿದ್ದಾರೆ. ಈ ಕೃತ್ಯಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.