ನವೆಂಬರ್ 2ರಂದು ಕೇಜ್ರಿವಾಲ್ ಬಂಧನ ಸಾಧ್ಯತೆ!

Prasthutha|

- Advertisement -

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ED ವಿಚಾರಣೆ ನಡೆಸಿದ ನಂತರ ನವೆಂಬರ್ 2 ರಂದು ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಆಮ್ ಆದ್ಮಿ ಪಕ್ಷ ಆತಂಕ ವ್ಯಕ್ತಪಡಿಸಿದೆ. ದೆಹಲಿಯ ಆಡಳಿತ ಪಕ್ಷದ ಉನ್ನತ ನಾಯಕರನ್ನು ಕಂಬಿ ಹಿಂದೆ ಹಾಕುವ ಪ್ರಯತ್ನದಲ್ಲಿದೆ ಎಂದು ಎಎಪಿ ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ದೆಹಲಿ ಕ್ಯಾಬಿನೆಟ್ ಸಚಿವ ಅತಿಶಿ, ಚುನಾವಣೆಯಲ್ಲಿ ಕೇಜ್ರಿವಾಲ್ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದಿರುವ ಕಾರಣ ಎಎಪಿಯನ್ನು ಗುರಿಯಾಗಿಸಲು ಬಿಜೆಪಿ ಈ ತಂತ್ರಗಳನ್ನು ಬಳಸುತ್ತಿದೆ ಎಂದು ಹೇಳಿದ್ದಾರೆ.

- Advertisement -

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ಕೇಜ್ರಿವಾಲ್‍ಗೆ ಈಗಾಗಲೇ ಸಮನ್ಸ್ ನೀಡಲಾಗಿದೆ. ಮೂಲಗಳ ಪ್ರಕಾರ ನ 2 ರಂದು ಬೆಳಿಗ್ಗೆ 11 ಗಂಟೆಗೆ ದೆಹಲಿಯ ತನಿಖಾ ಸಂಸ್ಥೆಯ ಕಚೇರಿಯಲ್ಲಿ ಇಡಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದೆ.

ಇಡಿಯಿಂದ ಕೇಜ್ರಿವಾಲ್‍ಗೆ ಸಮನ್ಸ್ ನೀಡಿರುವುದು ಇದೇ ಮೊದಲು. ಈ ಪ್ರಕರಣದಲ್ಲಿ ಅವರನ್ನು ಏಪ್ರಿಲ್‍ನಲ್ಲಿ ಕೇಂದ್ರ ತನಿಖಾ ದಳ ವಿಚಾರಣೆ ನಡೆಸಿತ್ತು.

Join Whatsapp