KTF ಕಾರ್ಯಕರ್ತ ಅರ್ಷದೀಪ್ ದಲ್ಲಾ ನನ್ನು ಭಯೋತ್ಪಾದಕ ಎಂದು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ

Prasthutha|

ದೆಹಲಿ: ಕೆನಡಾ ಮೂಲದ ಗ್ಯಾಂಗ್ ಸ್ಟರ್ ಮತ್ತು ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಕಾರ್ಯಕರ್ತ ಅರ್ಶ್ದೀಪ್ ಸಿಂಗ್ ಗಿಲ್ ಅಲಿಯಾಸ್ ಅರ್ಶ್ ದಲ್ಲಾ ನನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ಭಯೋತ್ಪಾದಕ ಎಂದು ಘೋಷಿಸಿದೆ.

- Advertisement -

ಪ್ರಸ್ತುತ ಕೆನಡಾದಲ್ಲಿ ನೆಲೆಸಿರುವ ಅರ್ಷದೀಪ್ ಕೆಟಿಎಫ್ ನೊಂದಿಗೆ ಸಂಬಂಧ ಹೊಂದಿದ್ದಾನೆ. “ಉದ್ದೇಶಿತ ಹತ್ಯೆ, ಭಯೋತ್ಪಾದಕರಿಗೆ ಧನಸಹಾಯಕ್ಕಾಗಿ ಹಣವನ್ನು ಸುಲಿಗೆ ಮಾಡುವುದು, ಕೊಲೆಯತ್ನ, ಕೋಮು ಸಾಮರಸ್ಯವನ್ನು ಕದಡುವುದು ಮತ್ತು ಪಂಜಾಬ್ನ ಜನರಲ್ಲಿ ಭಯವನ್ನು ಸೃಷ್ಟಿಸುವುದು ಸೇರಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಖಲಿಸಿರುವ ಮತ್ತು ತನಿಖೆ ನಡೆಸಿದ ವಿವಿಧ ಪ್ರಕರಣಗಳಲ್ಲಿ ಅರ್ಷ್ದೀಪ್ ಆರೋಪಿಯಾಗಿದ್ದಾನೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

UAPA ಅಡಿಯಲ್ಲಿ ನಿಯೋಜಿತ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ಗೆ ಅರ್ಷ್ದೀಪ್ ತುಂಬಾ ಆಪ್ತನಾಗಿದ್ದು, ಅವನ ಪರವಾಗಿ ಭಯೋತ್ಪಾದಕ ಕೃತ್ಯಗಲನ್ನು ನಡೆಸುತ್ತಿದ್ದಾನೆ. ಭಯೋತ್ಪಾದಕ ಚಟುವಟಿಕೆಗಳ ಜೊತೆಗೆ ಕೊಲೆ, ಸುಲಿಗೆ ಮತ್ತು ಉದ್ದೇಶಿತ ಹತ್ಯೆಗಳಂತಹ ಘೋರ ಅಪರಾಧಗಳಲ್ಲಿ ಅವನು ಭಾಗಿಯಾಗಿದ್ದಾನೆ ಮತ್ತು ಭಯೋತ್ಪಾದಕ ಹಣಕಾಸು, ಗಡಿಯಾಚೆಗಿನ ಮಾದಕವಸ್ತುಗಳು ಅಥವಾ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಿದ್ದಾನೆ” ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೇಳಿದೆ.

Join Whatsapp