KSRTC ಮುಡಿಗೆ 9, BMTC ಗೆ 4 ರಾಷ್ಟ್ರೀಯ ಪ್ರಶಸ್ತಿ

Prasthutha|

ಬೆಂಗಳೂರು: ಕೆಎಸ್​ಆರ್​ಟಿಸಿಗೆ (Karnataka State Road Transport Corporation) ಒಟ್ಟು 9 ವರ್ಗಗಳಲ್ಲಿ ಹಾಗೂ ಬಿಎಂಟಿಸಿಗೆ 4 ವರ್ಗಗಳಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

- Advertisement -

ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ, ನವದೆಹಲಿಯ ಪಿ.ಹೆಚ್.ಡಿ. ಚೇಂಬರ್ಸ್​ನಲ್ಲಿ ಆಯೋಜಿಸಿದ್ದ 17ನೇ ವಿಶ್ವ ಸಂವಹನ ಸಮ್ಮೇಳನ ಮತ್ತು ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾತ್ತು.

ನಿಗಮದ ಪರವಾಗಿ ಕೆಎಸ್​ಆರ್​ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಹಿಮವರ್ಧನ ನಾಯ್ಡು ಅಲೂರಿ(ಚಿಕ್ಕಬಳ್ಳಾಪುರ ವಿಭಾಗ) ಕೋಲಾರ ವಿಭಾಗದ ವಿ. ಬಸವರಾಜು, ಬೆಂಗಳೂರು ಕೇಂದ್ರೀಯ ವಿಭಾಗದ ಎಸ್. ಲಕ್ಷ್ಮಣ್ ಹಾಗೂ ಮಂಡ್ಯ ವಿಭಾಗದ ಎಸ್.ಪಿ ನಾಗರಾಜ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

- Advertisement -

ಬಾಂಗ್ಲಾದೇಶ ಮಾಹಿತಿ ಆಯುಕ್ತ ಗುಲಾಂ ರೆಹಮಾನ್, ಪಿ.ಆರ್.ಸಿ.ಐ ಮುಖ್ಯಸ್ಥ ಎಂ ಬಿ ಜಯರಾಂ, ಎನ್.ಎಫ್.ಎಲ್ ನಿರ್ದೇಶಕ ಬಿ.ವಿ ವಿಠ್ಠಲ್, ಸ್ವಿಜರ್ಲೆಂಡ್ ಮಾಧ್ಯಮ ಹಾಗೂ ಪತ್ರಿಕೋದ್ಯಮ ಸಂಸ್ಥೆ ನಿರ್ದೇಶಕ ಪ್ರೊ. ಮ್ಯಾಥ್ಯು ಹಿಬರ್ಡ್ ವಿವಿಧ ವರ್ಗಗಳಲ್ಲಿ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಯಾವೆಲ್ಲ ವರ್ಗಗಳಲ್ಲಿ ಪ್ರಶಸ್ತಿಗಳು ಲಭಿಸಿವೆ ಎನ್ನುವ ವಿವರ ಈ ಕೆಳಗಿನಂತಿದೆ.

ಕೆಎಸ್​ಆರ್​ಟಿಸಿಗೆ ದೊರೆ ಪ್ರಶಸ್ತಿಗಳು

1. ವರ್ಷದ ಅತ್ಯುತ್ತಮ ಗ್ರಾಹಕ ಸ್ನೇಹಿ ಸಂಸ್ಥೆ- ಡೈಮಂಡ್ ಪ್ರಶಸ್ತಿ

2. ಅತ್ಯುತ್ತಮ ವರ್ಷದ ಸೇವಾ ಉಪಕ್ರಮ – ಡೈಮಂಡ್ ಪ್ರಶಸ್ತಿ

3. ಸಾಂಸ್ಥಿಕ ಹಾಗೂ ವ್ಯಾವಹಾರಿಕ ಸಂಪರ್ಕ ಉಪಕ್ರಮ- ಡೈಮಂಡ್ ಪ್ರಶಸ್ತಿ

4. ಗ್ರಾಹಕ ಸೇವೆಯಲ್ಲಿ ಅತ್ಯುತ್ತಮ ತಾಂತ್ರಿಕತೆ ಬಳಕೆ- ಬೆಳ್ಳಿ ಪ್ರಶಸ್ತಿ

5. ವಿವಿಧತೆ ಹಾಗೂ ಸಮಾನತೆಯ ಉತ್ತಮ ಉಪಕ್ರಮ- ಬೆಳ್ಳಿ ಪ್ರಶಸ್ತಿ

6. ಅತ್ಯುತ್ತಮ ವರ್ಷದ ಉಪಕ್ರಮ ಉತ್ಪನ್ನ- ಬೆಳ್ಳಿ ಪ್ರಶಸ್ತಿ

7. ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ- ಕಂಚಿನ ಪ್ರಶಸ್ತಿ

8. ಸಾರ್ವಜನಿಕ ಸಂಪರ್ಕ ಅಧ್ಯಯನ- ಕಂಚಿನ ಪ್ರಶಸ್ತಿ

9. ಪ್ರಾದೇಶಿಕ ಆಂತರಿಕ ನಿಯತಕಾಲಿಕ ಮುದ್ರಣ- ಸಮಾಧಾನಕರ ಪ್ರಶಸ್ತಿ.

ಬಿ.ಎಂ.ಟಿ.ಸಿಗೆ ಒಲಿದ ಪ್ರಶಸ್ತಿಗಳು

ಬಿಎಂಟಿಸಿಗೆ ಈ ಕೆಳಕಂಡ 4 ವರ್ಗಗಳಲ್ಲಿ ಪ್ರಶಸ್ತಿ ಲಭಿಸಿದ್ದು, ಸಂಸ್ಥೆಯ ಪರವಾಗಿ ಪಶ್ಚಿಮ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಎನ್, ಪ್ರಶಸ್ತಿಯನ್ನು ಸ್ವೀಕರಿಸಿದರು.

1.ಸಾಂಸ್ಥಿಕ ಕೈಪಿಡಿ ( Corporate Broucher)- ಡೈಮಂಡ್ ಪ್ರಶಸ್ತಿ

2.ಗ್ರಾಹಕ ಸೇವೆಯಲ್ಲಿ ಅತ್ಯುತ್ತಮ ತಾಂತ್ರಿಕತೆ ಬಳಕೆ- ಚಿನ್ನದ ಪ್ರಶಸ್ತಿ

3.ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ- ಬೆಳ್ಳಿ ಪ್ರಶಸ್ತಿ

4.ವರ್ಷದ ಅತ್ಯುತ್ತಮ ಸೃಜನಶೀಲ ಜಾಹೀರಾತು-ಕಂಚಿನ ಪ್ರಶಸ್ತಿ

Join Whatsapp