ಏಷ್ಯನ್ ಗೇಮ್ಸ್​ 2023: ಫೈನಲ್​ ಪ್ರವೇಶಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ

Prasthutha|

ಚೀನಾದ ಹ್ಯಾಂಗ್‌ಝೌನಲ್ಲಿ ಆಯೋಜಿಸಿರುವ ಏಷ್ಯನ್ ಗೇಮ್ಸ್ 2023ರ ಮಹಿಳಾ ಟಿ20 ಯಲ್ಲಿ ಭಾರತ ಕ್ರಿಕೆಟ್ ತಂಡ ಫೈನಲ್​ಗೆ ಪ್ರವೇಶಿಸಿದೆ.

- Advertisement -

ಪಿಂಗ್​ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್​ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಸ್ಮೃತಿ ಮಂದಾನ ನಾಯಕತ್ವದ ಭಾರತ ಮಹಿಳಾ ತಂಡ 8 ವಿಕೆಟ್​ಗಳ ಜಯ ಸಾಧಿಸಿ ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ.

ಈ ಮೂಲಕ ಭಾರತ ತಂಡವು ಪದಕವನ್ನು ಖಚಿತ ಪಡಿಸಿದ್ದು, ಫೈನಲ್​ನಲ್ಲಿ ಭಾರತ ತಂಡ ಪಾಕಿಸ್ತಾನ ಅಥವಾ ಶ್ರೀಲಂಕಾವನ್ನು ಎದುರಿಸಲಿದೆ.

- Advertisement -

ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳಾ ತಂಡ ಭಾರತದ ಬೌಲಿಂಗ್ ಬಿರುಗಾಳಿಗೆ ತತ್ತರಿಸಿ ಹೋಯಿತು. ಮೊದಲ ಓವರ್​ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಬಾಂಗ್ಲಾ ಕೇವಲ 51 ರನ್​ಗಳಿಗೆ ಆಲೌಟ್ ಆಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶಕ್ಕೆ ಪೂಜಾ ವಸ್ತ್ರಾಕರ್ ಆರಂಭದಲ್ಲೇ ಶಾಕ್ ನೀಡಿದರು. ಪೂಜಾ ತಮ್ಮ ಮೊದಲ ಓವರ್​​ನ ಮೊದಲ ಎಸೆತದಲ್ಲೇ ಶಾಥಿ ರಾಣಿಯನ್ನು ಔಟ್ ಮಾಡಿದರೆ, 5ನೇ ಎಸೆತದಲ್ಲಿ ಶಮೀಮಾ ಸುಲ್ತಾನ ಎಲ್​ಬಿ ಬಲೆಗೆ ಬಿದ್ದು ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ಬಳಿಕ ಸೋಭಾನಾ ಮೊಸ್ತರಿ 8 ರನ್ ಗಳಿಸಿ ನಿರ್ಗಮಿಸಿದರು.

Join Whatsapp