ದೇಶದ ರಾಜಕೀಯ ಚಿತ್ರಣ ಬದಲಾಗಲು ಮಂಗಳೂರಿನ ಫಲಿತಾಂಶ ನಾಂದಿ ಹಾಡಲಿದೆ : ಮಧು ಬಂಗಾರಪ್ಪ

Prasthutha|

ಮಂಗಳೂರು: ದೇಶದ ರಾಜಕೀಯ ಚಿತ್ರಣ ಬದಲಾಗಲು ಮಂಗಳೂರಿನ ಫಲಿತಾಂಶ ನಾಂದಿ ಹಾಡಲಿದೆ ಎಂದು ಕರ್ನಾಟಕ ಸರಕಾರದ ಶಿಕ್ಷಣ ಸಚಿವರು, ಮಂಗಳೂರು ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯ ಉಸ್ತುವಾರಿಯಾದ ಮಧು ಬಂಗಾರಪ್ಪ ಹೇಳಿದರು.

- Advertisement -

ಅವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಕರೆದಿದ್ದ ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಖಂಡಿತವಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಮತದಾರರು ಕಾಂಗ್ರೆಸ್‌ ‌ನ ಕೈಹಿಡಿಯಲಿದ್ದಾರೆ. ಮತೀಯ ವಾದ ಕೋಮುವಾದದ ಭಾವನಾತ್ಮಕ ವಿಚಾರಗಳಿಂದ ಜನ ವಿಮುಖರಾಗುತ್ತಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರಕಾರ ಕೊಟ್ಟಿರುವ ಗ್ಯಾರೆಂಟಿಗಳು ಜನರ ಬದುಕನ್ನು ಬೆಳಗಿಸಿವೆ. ಇದರ ಪ್ರಭಾವ ಮುಂದಿನ ಚುನಾವಣೆಯಲ್ಲಿ ಪ್ರತಿಬಿಂಬಿತವಾಗಲಿದೆ ಎಂದು ಹೇಳಿದರು.

- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಕಾರ್ಯಕರ್ತರ, ಸಂಘ ಸಂಸ್ಥೆಗಳ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಸರ್ವೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ವಿಧಾನ ಪರಿಷತ್ ಶಾಸಕರಾದ ಕೆ ಹರೀಶ್ ಕುಮಾರ್ ರವರು ಸಭೆಯ ಅಧ್ಯಕ್ಷತೆ ವಹಿಸಿದರು.
ಮಾಜಿ ಸಚಿವರಾದ ಬಿ ರಮಾನಾಥ್ ರೈ, ಅಭಯಚಂದ್ರ ಜೈನ್ ಮಾತನಾಡಿದರು.

ಬಿ ಇಬ್ರಾಹಿಂ, ಅಶೋಕ್ ಕುಮಾರ್ ರೈ, ಜೆ ಆರ್ ಲೋಬೊ, ಮಿಥುನ್ ರೈ, ಇಬ್ರಾಹಿಂ ಕೊಡಿಜಾಲ್, ಶಶಿದರ್ ಹೆಗ್ಡೆ, ಲುಕ್ಮನ್ ಬಂಟ್ವಾಳ್, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಕೃಪಾ ಆಳ್ವಾ, ಅಶ್ವಿನ್ ಕುಮಾರ್ ರೈ, ಪದ್ಮರಾಜ್ ಆರ್, ಇನಾಯತ್ ಅಲಿ, ಜಿ ಕೃಷ್ಣಪ್ಪ, ಬ್ಲಾಕ್ ಅಧ್ಯಕ್ಷರುಗಳು , ಜಿಲ್ಲಾ ಕಾಂಗ್ರೆಸ್ ಮುಂಚೂಣಿ ಘಟಕಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್ ನಾಯಕರು, ಮನಪಾ ಸದಸ್ಯರು ಉಪಸ್ಥಿತರಿದ್ದರು

Join Whatsapp