ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೆಆರ್‌ಎಸ್ ನೀರಿನ ಮಟ್ಟ ದಿನೇ ದಿನೆ ಏರಿಕೆಯಾಗುತ್ತಿದೆ. ಸದ್ಯ ನೀರಿನ ಮಟ್ಟ 110 ಅಡಿಗೆ ತಲುಪಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಭರ್ತಿಗೆ ಇನ್ನೂ 14 ಅಡಿ ಮಾತ್ರ ಬಾಕಿ ಇದೆ. ಕನ್ನಂಬಾಡಿ ಕಟ್ಟೆ ಭರ್ತಿಯ ಸನಿಹದಲ್ಲಿದೆ. 124.80 ಗರಿಷ್ಠ ಮಟ್ಟವಿರುವ ಡ್ಯಾಂ ಇದೀಗ 110.82 ಅಡಿಗಳಷ್ಟು ಭರ್ತಿಯಾಗಿದೆ. 49.452 ಟಿಎಂಸಿ ಸಾಂದ್ರತೆ ಉಳ್ಳ ಕೆಆರ್‌ಎಸ್ ಡ್ಯಾಂನಲ್ಲಿ 32.554 ಟಿಎಂಸಿ ನೀರು ಶೇಖರಣೆಯಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಈ ಹಿನ್ನೆಲೆ ಕೆಆರ್‌ಎಸ್ ಡ್ಯಾಂ ಒಳಹರಿವಿನ ಪ್ರಮಾಣ ಕುಗ್ಗಿದೆ. ಸದ್ಯ ಡ್ಯಾಂಗೆ 33,566 ಕ್ಯೂಸೆಕ್ ನೀರು ಹೊರಹರಿವು ಮಾಡಲಾಗಿದೆ. ಡ್ಯಾಂನ ಹೊರ ಹರಿವು 3,106 ಕ್ಯೂಸೆಕ್‌ನಷ್ಟಿದೆ.