ಬರೋಬ್ಬರಿ 10 ಕೋಟಿ ರೂ. ಲಾಟರಿ ಹಣ ಗೆದ್ದ 11 ಪೌರಕಾರ್ಮಿಕ ಮಹಿಳೆಯರು !

Prasthutha|

ಮಲಪ್ಪುರಂ: 11 ಮಂದಿ ಮಹಿಳಾ ಪೌರಕಾರ್ಮಿಕರು ಬರೋಬ್ಬರಿ 10 ಕೋಟಿ ರೂ. ಲಾಟರಿ ಗೆದ್ದಿರುವುದು ಕೇರಳದ ಮಲಪ್ಪುರಂ ಜಿಲ್ಲೆಯ ಪರಪ್ಪನಂಗಡಿಯಲ್ಲಿ ವರದಿಯಾಗಿದೆ.
ಬುಧವಾರ ನಡೆದ ಡ್ರಾ ನಂತರ ಕೇರಳ ಲಾಟರಿ ಇಲಾಖೆಯು 10 ಕೋಟಿ ರೂಪಾಯಿಗಳ ಮಾನ್ಸೂನ್ ಬಂಪರ್ ವಿಜೇತರನ್ನು ಘೋಷಿಸಿದ್ದು 11 ಮಂದಿ ಮಹಿಳಾ ಪೌರ ಕಾರ್ಮಿಕರು ವಿಜೇತರಾಗಿದ್ದಾರೆ.

- Advertisement -


ಮೊದಲು 9 ಮಂದಿ ಸೇರಿ ಲಾಟರಿ ಟಿಕೆಟ್ ಖರೀಸಲು ನೋಡಿದೆವು, ಆದರೆ ಹಣದ ಕೊರತೆಯಿಂದ ಮತ್ತಿಬ್ಬರು ಕಾರ್ಮಿಕರು ಸೇರಿಕೊಂಡರು. ಕೊನೆಗೆ 11 ಮಂದಿ ಸೇರಿದ 250 ರೂಪಾಯಿಯ ಟಿಕೆಟ್ ಖರೀದಿಸಿದೆವು ಎಂದು ಟಿಕೆಟ್ ಖರೀದಿಸಿದ ರಾಧ ತಿಳಿಸಿದ್ದಾರೆ. ಕುಟ್ಟಿಮಾಲು, ಬೇಬಿ, ಶೋಭಾ, ಪಾರ್ವತಿ, ರಾಧಾ, ಲಕ್ಷ್ಮಿ, ಲೀಲಾ, ಬಿಂದು, ಶೀಜಾ, ಚಂದ್ರಿಕಾ ಮತ್ತು ಕಾರ್ತ್ಯಾಯನಿ ಮಾನ್ಸೂನ್ ಬಂಪರ್ ಪ್ರಥಮ ಬಹುಮಾನ ಪಡೆದವರು.


ಸಾಲಗಳ ಬಾಕಿ, ಮಕ್ಕಳ ಮದುವೆ, ಆಸ್ಪತ್ರೆ, ಚಿಕಿತ್ಸೆಯ ವೆಚ್ಚ ಸೇರಿ ನಾವೆಲ್ಲರೂ ಆರ್ಥಿಕವಾಗಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದೆವು. ಈಗ ಹಣ ಗೆದ್ದಿರುವುದು ಬದುಕಿನಲ್ಲಿ ಹಲವು ಸಮಸ್ಯೆಗಳ ನಿವಾರಣೆಗೆ ನೆರವಾಗಲಿದೆ’ ಎನ್ನುತ್ತಾರೆ ಪೌರಕಾರ್ಮಿಕ ಮಹಿಳೆಯರು.

Join Whatsapp