ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ನೀಡಿದ ಚಪಾತಿ ಊಟದಲ್ಲಿ ಜಿರಳೆ ಪತ್ತೆ : ಪ್ರಯಾಣಿಕ ಶಾಕ್‌!

Prasthutha|

ಭೋಪಾಲ್:‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ನೀಡಲಾದ ಚಪಾತಿ ಊಟದಲ್ಲಿ ಜಿರಳೆ ಕಂಡು ದಿಗ್ಭ್ರಮೆಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

- Advertisement -

ಭೋಪಾಲ್‌ನಿಂದ ಗ್ವಾಲಿಯರ್‌ಗೆ ಪ್ರಯಾಣಿಸುತ್ತಿದ್ದ ವೇಳೆ IRCTC ಕ್ಯಾಟರಿಂಗ್‌ ಸಿಬ್ಬಂದಿ ಬಡಿಸಿದ ಚಪಾತಿ ಊಟದಲ್ಲಿ ಜಿರಳೆ ಪತ್ತೆಯಾಗಿದೆ. ಬ್ಲಾಗರ್‌ ಸುಬೋಧ್ ಪಹಲಾಜನ್ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಈ ಕುರಿತ ಫೋಟೋಗಳನ್ನ ಹಂಚಿಕೊಂಡಿದ್ದು ಭಾರೀ ಸದ್ದು ಮಾಡುತ್ತಿದೆ.

ಟ್ವೀಟ್‌ ಮೂಲಕ ಹಂಚಿಕೊಳ್ಳಲಾದ ಫೋಟೋಗಳಲ್ಲಿ ಚಪಾತಿಗೆ ಸಣ್ಣ ಜಿರಳೆಯೊಂದು ಅಂಟಿಕೊಂಡಿರುವುದನ್ನ ತೋರಿಸಿದೆ. ಇದನ್ನ ಐಆರ್‌ಸಿಟಿಸಿ ಅಧಿಕೃತ ಖಾತೆಗೆ ಟ್ಯಾಗ್‌ ಮಾಡಿದ್ದು, ವಂದೇ ಭಾರತ್‌ ರೈಲಿನಲ್ಲಿ ನನಗೆ ನೀಡಲಾದ ಆಹಾರದಲ್ಲಿ ಜಿರಳೆ ಕಂಡುಬಂದಿದೆ ಎಂದು ಬರೆದುಕೊಂಡಿದ್ದಾರೆ.

- Advertisement -

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಐಆರ್‌ಸಿಟಿಸಿ, ಪ್ರಯಾಣಿಕನ ಸಮಸ್ಯೆಯನ್ನು ಬಗೆಹರಿಸಿದೆ. ಅಲ್ಲದೇ ನಿಮಗೆ ಸಂಭವಿಸಿದ ಅಹಿತಕರ ಘಟನೆಗಾಗಿ ವಿಷಾದಿಸುತ್ತೇವೆ. ಮುಂದೆ ಅಂತಹ ಯಾವುದೇ ಘಟನೆಗಳು ನಡೆಯದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದೆ.

Join Whatsapp