ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ತಾಯಿ: ಮಗಳು ಮೃತ್ಯು

Prasthutha|

►ಕುಡಿದು ಬಂದು ಪತಿಯಿಂದ ಚಿತ್ರಹಿಂಸೆ; ತಾಯಿ, ಮಗನ ಸ್ಥಿತಿ ಗಂಭೀರ

- Advertisement -

ಕೊಳ್ಳೇಗಾಲ: ಕೌಟುಂಬಿಕ ಕಲಹಕ್ಕೆ ಗೃಹಿಣಿಯೋರ್ವಳು ತನ್ನ ಇಬ್ಬರು ಮಕ್ಕಳ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಒರ್ವ ಮಗಳು ಸಾವನ್ನಪ್ಪಿದ ಘಟನೆಯೊಂದು ತಾಲ್ಲೂಕಿನ ಮಧುವನಹಳ್ಳಿಯಲ್ಲಿ ಜರುಗಿದೆ.

 ತಾಯಿ ಮತ್ತು ಮಗ ಚಿಂತಾಜನಕ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

- Advertisement -

ಗ್ರಾಮದ ಷಣ್ಮುಗ ಸ್ವಾಮಿ ಎಂಬವರ ಪತ್ನಿ ಶೀಲಾ (30) ಮಗ ಯಶವಂತ್ (8) ಚಿಂತಾಜನವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪುತ್ರಿ ಸಿಂಧು(9) ಮೃತಪಟ್ಟ ಬಾಲಕಿ.

ಘಟನೆ ವಿವರ

ಪ್ರತಿನಿತ್ಯ ಷಣ್ಮುಗ ಸ್ವಾಮಿ ಕುಡಿದು ಬಂದು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಜಗಳವಾಡುತ್ತಿದ್ದ. ಆದರೆ ಮಂಗಳವಾರ ರಾತ್ರಿ ಷಣ್ಮುಗ ಸ್ವಾಮಿ ಕುಡಿದು ಬಂದು ಹೆಂಡತಿ ಶೀಲಾ ಹಾಗೂ ಮಕ್ಕಳಿಗೆ ಹೊಡೆದು ಚಿತ್ರಹಿಂಸೆ ನೀಡಿದ್ದಾನೆ. ಇದರಿಂದ ಬೇಸತ್ತ ಶೀಲಾ ಬುಧವಾರ ಬೆಳ್ಳಂಬೆಳಗ್ಗೆ ಮಕ್ಕಳಿಗೆ ವಿಷ ಕೊಡಿಸಿ ತಾನೂ ವಿಷ ಸೇವಿಸಿದ್ದಾಳೆ. ವಿಷ ಕುಡಿದು ಮಕ್ಕಳು ಹಾಗೂ ಶೀಲಾ ನರಳುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಮನೆಯೊಳಗೆ ಹೋಗಿ ತಕ್ಷಣ ಅವರನ್ನು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸುವಲ್ಲಿ ಮುಂದಾದರು. ಆದರೆ ಸಿಂಧು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

 ತಾಯಿ ಹಾಗೂ ಮಗ ಯಶ್ವಂತ್ ಸ್ಥಿತಿ ಗಂಭೀರವಾಗಿದೆ. ಇಬ್ಬರನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಯಿತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.