ಮಂಗಳೂರು: ಎಂಡಿಎಂಎ ಡ್ರಗ್ಸ್ ಮಾರಾಟ; ಮಾರಕಾಯುಧ ಸಹಿತ ಇಬ್ಬರ ಬಂಧನ

Prasthutha|

ಮಂಗಳೂರು: ಮೂಡುಶೆಡ್ಡೆಗೆ ಹೋಗುವ ಮಾರ್ಗದಲ್ಲಿ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಕಾವೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ.

- Advertisement -

ಮೂಡುಶೆಡ್ಡೆಯ ಮುಹಮ್ಮದ್‌ ಶಾರೂಕ್‌(27) ಮತ್ತು ತೋಕೂರಿನ ಜಗದೀಶ್‌(45) ಬಂಧಿತ ಆರೋಪಿಗಳು. ಇವರಿಂದ 4 ಗ್ರಾಂ ಎಂಡಿಎಂಎ ಮತ್ತು ಮೂರು ಮಾರಕಾಯುಧ ಹಾಗೂ ಒಂದು ಸ್ವಿಫ್ಟ್ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ನಗರದ ಉತ್ತರ ಉಪ-ವಿಭಾಗದ ಎಸಿಪಿ ಮನೋಜ್‌ ಕುಮಾರ್‌ ನೇತೃತ್ವದಲ್ಲಿ ಕಾವೂರು ಪೊಲೀಸ್‌ ನಿರೀಕ್ಷಕ ಗುರುರಾಜ್‌ ಮತ್ತು ಪಿ.ಎಸ್‌.ಐ ಮಲ್ಲಿಕಾರ್ಜುನ ಬಿರಾದಾರ್, ಸಿಬಂದಿಗಳಾದ ತಾರಾನಾಥ ಪುತ್ರನ್‌, ಕಿಶೋರ್,ಲತೇಶ್‌, ಸಂಭಾಜಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Join Whatsapp