ಮಂಗಳೂರು: ರೈಲು ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ!

Prasthutha|

ಮಂಗಳೂರು: ಉಳ್ಳಾಲ – ನೇತ್ರಾವತಿ ಸೇತುವೆ ನಡುವಿನ ತೊಕ್ಕೊಟ್ಟು ರೈಲು ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿ ಬುಧವಾರ ಮೃತಪಟ್ಟಿದ್ದು, ರೈಲ್ವೇ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಲೋಕೋ ಪೈಲೆಟ್‌ ಸೆಂಟ್ರಲ್‌ ರೈಲು ನಿಲ್ದಾಣದ ಸ್ಟೇಷನ್‌ ಮಾಸ್ಟರ್‌ ದೇವೆಂದರ್‌ ಅವರಿಗೆ ನೀಡಿದ ಮಾಹಿತಿಯಂತೆ ರೈಲ್ವೇ ಪೊಲೀಸರು ದೂರು ದಾಖಲಿಸಿದ್ದು, ಸುಮಾರು 40 ರಿಂದ 45ರ ವರ್ಷದ ಅಪರಿಚಿತನಾಗಿದ್ದು ಅಪಘಾತಕ್ಕೆ ಮುಖ ಜಜ್ಜಿ ಹೋಗಿದೆ ಎನ್ನಲಾಗಿದೆ.

ಮೃತ ವ್ಯಕ್ತಿ ಕಪ್ಪು ಬಣ್ಣದ ತುಂಬು ತೋಳಿನ ಶರ್ಟ್‌ ಮತ್ತು ನೀಲಿ ಬಣ್ಣದ ಜೀನ್ಸ್‌ ಧರಿಸಿದ್ದು, ವಾರಸುದಾರರು ಪತ್ತೆಯಾದರೆ ಮಂಗಳೂರು ರೈಲ್ವೇ ಠಾಣೆ, 0824-2220559 ಅಥವಾ ರೈಲ್ವೇ ಪೊಲೀಸ್‌ ನಿಯಂತ್ರಣ ಕೊಠಡಿ ದೂರವಾಣಿ 080-22871291 ಅವರನ್ನು ಸಂಪರ್ಕಿಸಬಹುದು ಎಂದು ರೈಲ್ವೇ ಪೊಲೀಸ್‌ ಠಾಣಾ ಪ್ರಕಟಣೆ ತಿಳಿಸಿದೆ.