ಕೊಡಗು: ಜಿಲ್ಲೆಯಾದ್ಯಂತ ‌ಮುಂದುವರಿದ ವರುಣನ ಆರ್ಭಟ

Prasthutha|

ಕೊಡಗು: ಜಿಲ್ಲೆಯ ಹಲವೆಡೆ ನಿರಂತರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆ  ಶಾಲೆ – ಅಂಗನವಾಡಿಗಳಿಗೆ ರಜೆ ನೀಡಲಾಗಿದೆ.

- Advertisement -

ಭೂಕುಸಿತ, ಪ್ರವಾಹದಿಂದ ತತ್ತರಿಸಿರುವ ಚೆಂಬು, ಸಂಪಾಜೆ, ಮದೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ದಬ್ಬಡ್ಕ, ಊರುಬೈಲು ಗ್ರಾಮಗಳಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದೆ ಪರದಾಡುತ್ತಿದ್ದಾರೆ.

ಮಳೆಯಿಂದ ರಸ್ತೆ ಸಂಪರ್ಕ ಕಡಿದುಕೊಂಡಿರುವ ಗ್ರಾಮಗಳಲ್ಲಿ ಟೆಲಿ ಫೋನ್ ನೆಟ್ವರ್ಕ್ ಕೂಡಾ ಇಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ.

- Advertisement -

ನಾಪೋಕ್ಲು ವ್ಯಾಪ್ತಿಯಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಮೂರ್ನಾಡು – ನಾಪೋಕ್ಲು ರಸ್ತೆ ಮುಳುಗಡೆ ಯಾಗಿ  ಸಂಚಾರ ಸ್ಥಗಿತಗೊಂಡಿದೆ. ಭಾಗಮಂಡಲ ವ್ಯಾಪ್ತಿಯಲ್ಲೂ ನಿಲ್ಲದ ಮಳೆಯಿಂದಾಗಿ  ತ್ರಿವೇಣಿ ಸಂಗಮ ಭರ್ತಿಯಾಗಿದೆ.

ಗಾಳಿ ಮಳೆ ಹಿನ್ನೆಲೆ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಾನಿಯುಂಟಾಗಿದ್ದು, ಜಿಲ್ಲೆಯ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಜನರು ಪರದಾಡುತ್ತಿದ್ದಾರೆ.

ಹಾನಗಲ್ ಚಂದಮಕ್ಕಿ ಗ್ರಾಮದಲ್ಲಿ ಲಕ್ಷ್ಮಣ್ ಎಂಬವರ ಮನೆ ಹಾಗೂ  ಮಾಲಂಬಿ ಕೂಡುರಸ್ತೆಯ ಲಕ್ಷ್ಮಮ್ಮ ಮುತ್ತಣ್ಣ ಎಂಬವರ ಮನೆ ಕುಸಿದು ಸಾಕಷ್ಟು ನಷ್ಟವುಂಟಾಗಿದೆ.

Join Whatsapp