ಕೇರಳದಲ್ಲಿ ಭಾರೀ ಮಳೆ: ಕಾಡಿನಲ್ಲಿ ಸಿಲುಕಿದ್ದ ಮೂವರು ಗರ್ಭಿಣಿಯರನ್ನು ರಕ್ಷಿಸಿದ ಅಧಿಕಾರಿಗಳು

Prasthutha|

ತ್ರಿಶೂರ್ : ದಕ್ಷಿಣ ರಾಜ್ಯ ಕೇರಳದ ವಿವಿಧ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ, ಅರಣ್ಯದಲ್ಲಿ ಸಿಲುಕಿದ್ದ ಮೂವರು ಗರ್ಭಿಣಿಯರನ್ನು ಅಧಿಕಾರಿಗಳು ಶುಕ್ರವಾರ ರಕ್ಷಿಸಿದ್ದಾರೆ.

- Advertisement -

ಭಾರಿ ಮಳೆಯಿಂದಾಗಿ  ಕಾಡಿನ ಮಧ್ಯದಲ್ಲಿ ಸಿಲುಕಿಕೊಂಡಿದ್ದ  ಗರ್ಭಿಣಿ ಮಹಿಳೆಯರನ್ನು   ಅರಣ್ಯ ಇಲಾಖೆ ಮತ್ತು ಪೊಲೀಸರ ಸಹಾಯದಿಂದ ಸುರಕ್ಷಿತವಾಗಿ ಕಾಲೋನಿಗೆ ಸ್ಥಳಾಂತರಿಸಲಾಯಿತು.

ಮೂವರು ಮಹಿಳೆಯರಲ್ಲಿ ಒಬ್ಬರು ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದರಿಂದ ಕಾಡಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ತಾಯಿ ಮತ್ತು ಮಗು ಸುರಕ್ಷಿತವಾಗಿದೆ ಎಂದು ತಿಳಿದು ಬಂದಿದೆ.

- Advertisement -

ಜಿಲ್ಲಾ ವೈದ್ಯಾಧಿಕಾರಿ ನೇತೃತ್ವದ ತಂಡವು ಮೂವರ  ಮನವೊಲಿಸಿ   ಚಾಲಕ್ಕುಡಿ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರಿಸಿತು.

ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಗರ್ಭಿಣಿಯರನ್ನು ರಕ್ಷಿಸಿದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Join Whatsapp