ಕೊಡಗು: ಬರೆ ಕುಸಿತದಿಂದ ಮನೆಗೆ ಹಾನಿ

Prasthutha|

ಮಡಿಕೇರಿ: ಪಕ್ಕದಲ್ಲಿದ್ದ ಬರೆ ಕುಸಿತಗೊಂಡು ಮನೆಗೆ ಅಪಾರ ಪ್ರಮಾಣದ ಹಾನಿಯಾಗಿರುವ ಘಟನೆ ಜಿಲ್ಲೆಯ ಕರ್ಣಂಗೆರಿ ಗ್ರಾಮದ ಗುಂಡಿ ಬೈಲ್ ನಲ್ಲಿ ನಡೆದಿದೆ.

- Advertisement -

ಗುಂಡಿ ಬೈಲ್ ನಿವಾಸಿ ಜಮೀಲ್ ಅವರ ಮನೆಯ ಒಂದು ಭಾಗದ ಬರೆ ಕುಸಿತಗೊಂಡು ಕೆಳಭಾಗದಲ್ಲಿ ವಾಸ ಮಾಡುತ್ತಿದ್ದ  ಸುಂದರಿಯವರ ಮನೆ ಮೇಲೆ ಬಿದ್ದಿದೆ. ಇದರಿಂದ 2 ಮನೆಗಳಿಗೂ ಅಪಾರ ಪ್ರಮಾಣದ ಹಾನಿಯಾಗಿದ್ದು ಸ್ಥಳಕ್ಕೆ ಗ್ರಾಮ ಪಂಚಾಯತಿ ಸದಸ್ಯರದ ಜಾನ್ಸನ್ ಪಿಂಟೋ ಭೇಟಿ ನೀಡಿ ಪರಿಶೀಲನೆ ನಡೆಸಿ ಕಂದಾಯ ಅಧಿಕಾರಿಗೆ ಸೂಕ ಪರಿಹಾರ ಒದಗಿಸುವಂತೆ ಮನವಿ ಮಾಡಲಾಯಿತು.

ಈ ವೇಳೆ  ಗ್ರಾಮ ಲೆಕ್ಕಾಧಿಕಾರಿ ರುದ್ರೇಶ್ , ರೆವೆನ್ಯೂ ಅಧಿಕಾರಿ ಚಂದ್ರಪ್ರಸಾದ್ , ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ಡೀನ್ ಬೋಪಣ್ಣ ಉಪಸ್ಥಿತರಿದ್ದರು.

Join Whatsapp