ಕೊಡಗು: ಮಂಜು ಕವಿದ ವಾತಾವರಣ ಹಿನ್ನೆಲೆ; ಕಾರುಗಳು ಪರಸ್ಪರ ಡಿಕ್ಕಿ: ಓರ್ವ ಮೃತ್ಯು

Prasthutha|

ಮಡಿಕೇರಿ: ಎರಡು ಕಾರುಗಳು ಪರಸ್ಪರ   ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸುಂಟಿಕೊಪ್ಪದ ಕೊಡಗರಹಳ್ಳಿಯಲ್ಲಿ ನಡೆದಿದೆ.

- Advertisement -

ಸುಂಟಿಕೊಪ್ಪ ನಿವಾಸಿ  ಮುಸ್ತಫ (47)  ಎಂಬವರು ಮೃತ ವ್ಯಕ್ತಿ. ಇಂದು ಬೆಳಗ್ಗೆ ತಮ್ಮ ಇನೊವಾ ಕಾರಿನಲ್ಲಿ ಮಗಳನ್ನು ದ್ವಿತೀಯ ಪಿಯುಸಿ ಪರೀಕ್ಷೆಗೆಂದು ಕುಶಾಲನಗರ ಕಾಲೇಜಿಗೆ ಬಿಟ್ಟು ಸುಂಟಿಕೊಪ್ಪಕ್ಕೆ ಮರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.

ಮಡಿಕೇರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಪ್ರವಾಸಿಗರಿದ್ದ ಕಾರು ಹಾಗೂ ಇನೊವಾ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp