ಕೊಡಗು: ಆದಿವಾಸಿ ಮಕ್ಕಳಿಗೆ ವಿಧ್ಯಾಭ್ಯಾಸ ಪರಿಕರಗಳ ವಿತರಣೆ

Prasthutha|

ಮಡಿಕೇರಿ: ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಜನಶಕ್ತಿ ಸಂಘಟನೆ, ಹಾಗೂ ಭೂಮಿ ಮತ್ತು ವಸತಿ ಹೋರಾಟ ಸಮಿತಿಯಿಂದ ಕೊಡಗು ಜಿಲ್ಲೆಯ ಆದಿವಾಸಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪರಿಕರಗಳನ್ನು ವಿತರಿಸಲಾಯಿತು.

- Advertisement -

ಪ್ರತಿ ವರ್ಷದಂತೆ ಈ ವರ್ಷ ಕೂಡಾ ದಾನಿಗಳ ಮೂಲಕ ಅಂದಾಜು 150 ಆದಿವಾಸಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೋಟ್ ಪುಸ್ತಕ, ಪೆನ್, ಪೆನ್ಸಿಲ್ ಸೇರಿದಂತೆ ಪರಿಕರಗಳು ಹಾಗೂ ಅಕ್ಕಿಯನ್ನು ವಿರಾಜಪೇಟೆ ತಾಲ್ಲೂಕಿನ ಹಳ್ಳಿಘಟ್ಟು ಹಾಡಿಯಲ್ಲಿ ವಿತರಿಸಲಾಯಿತು.

ಕೊಡಗಿನ ಆದಿವಾಸಿ ಮಕ್ಕಳ ಶಿಕ್ಷಣಕ್ಕಾಗಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆ.ವಿ.ಎಸ್) ಕಳೆದ 7 ವರ್ಷದಿಂದ ಪ್ರತಿ ವರ್ಷವೂ ಶ್ರಮಿಸುತ್ತಿದೆ. 18 ವಿದ್ಯಾರ್ಥಿಗಳಿಂದ ಆರಂಭವಾದ ಈ ತಂಡದ ಕೆಲಸ ಈಗ ಕೊಡಗು, ಚಾಮರಾಜನಗರ, ಹೆಚ್.ಡಿ ಕೋಟೆ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸುಮಾರು 400 ಕ್ಕೂ ಹೆಚ್ಚು ಆದಿವಾಸಿ ಅಲೆಮಾರಿ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿದೆ.

- Advertisement -

ಈ ವರ್ಷವೂ ಕೊಡಗಿನ 150 ಆದಿವಾಸಿ ಮಕ್ಕಳಿಗೆ ಶಿಕ್ಷಣಕ್ಕಾಗಿ ಬೇಕಾದ ಸಾಮಗ್ರಿಗಳನ್ನು ಉಚಿತವಾಗಿ ನೀಡಿದೆ. ಅಲ್ಲದೆ ಆದಿವಾಸಿ ಮಕ್ಕಳ ಕ್ರೀಡೆ ಮತ್ತು ಅವರ ಕೌಶಲ್ಯಗಳನ್ನು ಗುರುತಿಸಿ ಅವರಿಗೆ ಸಹಕರಿಸುತ್ತಿದೆ ಎಂದು ಸಂಘಟನೆಯ ಪ್ರಮುಖರಾದ ಹೇಮಂತ್ ಮಾಹಿತಿ ನೀಡಿದರು.

Join Whatsapp