ನ್ಯಾಯಾಲಯದ ಹಾದಿ ತಪ್ಪಿಸುವ ದಿಲ್ಲಿ ಪೊಲೀಸರ ಪ್ರಯತ್ನ ಖಂಡನೀಯ: ಅನೀಸ್ ಅಹ್ಮದ್

Prasthutha|

ನವದೆಹಲಿ: ಸಂಘಟನೆಯ ಕುರಿತು ದಿಲ್ಲಿ ಹೈಕೋರ್ಟ್ ಗೆ ದಿಲ್ಲಿ ಪೊಲೀಸರು ನೀಡಿರುವ ಸುಳ್ಳು ಹೇಳಿಕೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿಕೆಯೊಂದರಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.

- Advertisement -

ಜೆ.ಎನ್.ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸುತ್ತಾ ದಿಲ್ಲಿ ಪೊಲೀಸರು, ದಿಲ್ಲಿ ಹೈಕೋರ್ಟ್ ಗೆ ಸಲ್ಲಿಸಿರುವ ತನ್ನ ಹೇಳಿಕೆಯಲ್ಲಿ ಪಾಪ್ಯುಲರ್ ಫ್ರಂಟ್ ಕುರಿತು ಹಲವಾರು ತಪ್ಪು ವಾದಗಳನ್ನು ಮಂಡಿಸಿದ್ದಾರೆ. ದಿಲ್ಲಿ ಪೊಲೀಸರು ಸುಳ್ಳು ಕಥೆಗಳನ್ನು ಸೃಷ್ಟಿಸುವ ಮೂಲಕ ಹೈಕೋರ್ಟ್ ನ ಹಾದಿ ತಪ್ಪಿಸಲು ನಿರಂತರವಾಗಿ ಪ್ರಯತ್ನಿಸಿದ್ದಾರೆ. ಈಶಾನ್ಯ ದಿಲ್ಲಿ ಹಿಂಸಾಚಾರವನ್ನು ಪೊಲೀಸರು ಹೇಗೆ ನಿಭಾಯಿಸಿದರು ಎಂಬುದನ್ನು ನ್ಯಾಯಾಲಯಗಳು ಟೀಕಿಸಿದ ಹಲವಾರು ಪ್ರಕರಣಗಳೂ ಇವೆ ಎಂದು ಅನೀಸ್ ಅಹ್ಮದ್ ಹೇಳಿದ್ದಾರೆ.

ಶಾಹೀನ್ ಬಾಗ್ ಹೋರಾಟವು ಎಲ್ಲಾ ಧಾರ್ಮಿಕ ಮತ್ತು ಸೈದ್ಧಾಂತಿಕ ಹಿನ್ನೆಲೆ ಹೊಂದಿದ ಜನರಿಂದ ಪ್ರಾರಂಭಿಸಲಾದ, ನೇತೃತ್ವ ವಹಿಸಲಾದ ಮತ್ತು ಮುಂದುವರಿಸಲಾದ ಜನಪರ ಹೋರಾಟವಾಗಿತ್ತು ಮತ್ತು ಅದು ಯಾವುದೇ ನಿರ್ದಿಷ್ಟ ಪಕ್ಷ ಮತ್ತು ಗುಂಪಿನಿಂದ ನಿಯಂತ್ರಿಸಲಾಗಿರಲಿಲ್ಲ. ಮಾತ್ರವಲ್ಲ, ಸಂಘಟನೆಯು ಅದನ್ನು ಮುನ್ನಡೆಸುತ್ತಿಲ್ಲ. ಆದರೆ ನಾಗರಿಕ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ತನ್ನ ಬದ್ಧತೆಯ ಭಾಗವಾಗಿ, ಎನ್.ಆರ್.ಸಿ ಮತ್ತು ಸಿಎಎಯಂತಹ ಜನವಿರೋಧಿ ನೀತಿಗಳ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುವ ಶಾಹೀನ್ ಬಾಗ್ ಜನರ ಹಕ್ಕುಗಳಿಗೆ ನಮ್ಮ ಬೆಂಬಲವಿದೆ ಎಂಬ ವಿಚಾರವನ್ನು ಸ್ವತಃ ಪಾಪ್ಯುಲರ್ ಫ್ರಂಟ್ ನಾಯಕತ್ವವು ಪ್ರತಿಭಟನೆಯ ಸಂದರ್ಭದಲ್ಲೇ ಸ್ಪಷ್ಟಪಡಿಸಿತ್ತು. ಆದರೆ ಪೊಲೀಸರು, ಶಾಹೀನ್ ಬಾಗ್ ನ ಐತಿಹಾಸಿಕ ಪ್ರಜಾಸತ್ತಾತ್ಮಕ ಪ್ರತಿಭಟನೆಯನ್ನು ಅಪರಾಧ ಕೃತ್ಯವಾಗಿ ಬಿಂಬಿಸಲು ಪ್ರಾರಂಭದಲ್ಲೇ ಉತ್ಸುಕವಾಗಿದ್ದರು ಎಂದು ಅವರು ತಿಳಿಸಿದ್ದಾರೆ.

- Advertisement -

ದಿಲ್ಲಿ ಪೊಲೀಸರು ಪಾಪ್ಯುಲರ್ ಫ್ರಂಟ್ ಅನ್ನು ದೇಶ ವಿರೋಧಿ ಸಂಘಟನೆಯಾಗಿ ಚಿತ್ರಿಸಿ ಮತ್ತು ಆ ನಂತರದಲ್ಲಿ ಯಾವುದೇ ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಪಾಪ್ಯುಲರ್ ಫ್ರಂಟ್ ನೊಂದಿಗೆ ಸಂಪರ್ಕ ಕಲ್ಪಿಸುತ್ತಾ ಅವುಗಳನ್ನು ಕಾನೂನುಬಾಹಿರಗೊಳಿಸುವ ಮೂಲಕ ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಗುರಿಪಡಿಸಿದ್ದಾರೆ. ದಿಲ್ಲಿ ಪೊಲೀಸರು ಸುಳ್ಳು ಕೇಸುಗಳಲ್ಲಿ ಸಿಲುಕಿಸುವ ಮೂಲಕ 2020ರಲ್ಲಿ ಪಾಪ್ಯುಲರ್ ಫ್ರಂಟ್ ದಿಲ್ಲಿ ರಾಜ್ಯ ನಾಯಕರನ್ನು ಗುರಿಪಡಿಸುವ ಪ್ರಯತ್ನವನ್ನೂ ನಡೆಸಿದ್ದರು ಎಂದು ಅನೀಸ್ ಅಹ್ಮದ್ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

Join Whatsapp