ನಟ ದರ್ಶನ್ ಬಂಧನ: ಕೊಲೆಯಾದ ರೇಣುಕಾಸ್ವಾಮಿ ಬಜರಂಗದಳ ಕಾರ್ಯಕರ್ತ

Prasthutha|

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಸೇರಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ರೇಣುಕಾಸ್ವಾಮಿ ಚಿತ್ರದುರ್ಗದ ನಿವಾಸಿಯಾಗಿದ್ದು, ಅಪೋಲೊ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ರೇಣುಕಾ ಸ್ವಾಮಿ ಬಜರಂಗದಳದಲ್ಲಿಯೂ ಗುರುತಿಸಿಕೊಂಡಿದ್ದು, 3ವರ್ಷದ ಹಿಂದೆ ಬಜರಂಗದಳ ಸುರಕ್ಷಾ ಪ್ರಮುಖ ಆಗಿ ನೇಮಕವಾಗಿದ್ದ ಎಂದು ತಿಳಿದು ಬಂದಿದೆ.

- Advertisement -

ದರ್ಶನ್ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ, ಪವಿತ್ರಾಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದ ಎಂದು ತಿಳಿದು ಬಂದಿದೆ.

Join Whatsapp