ಕಿಸ್ವ ಇಂಟರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ : ಬಿ.ಕೆ ವಾರಿಯರ್ಸ್ ಚಾಂಪಿಯನ್ಸ್

Prasthutha|

ಸೌದಿಅರೇಬಿಯಾ: ಅಲ್- ಜುಬೈಲ್ ನಲ್ಲಿ  ಇತ್ತಿಚೀಗೆ ನಡೆದ ಕಿಸ್ವ ಇಂಟರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ನ ಫೈನಲ್  ಪಂದ್ಯದಲ್ಲಿ  ಬಿ ಕೆ ವಾರಿಯರ್ಸ್ ತಂಡವು ಪ್ಯಾಂಥರ್ಸ್ ತಂಡವನ್ನು 9 ವಿಕೆಟ್ ಗಳಿಂದ  ಸೋಲಿಸಿ ಚೊಚ್ಚಲ  “ಕಿಸ್ವ ಕಿಲ್ ಕ್ರಿಕೆಟ್  ಟ್ರೋಫಿ -2022 “ ಯನ್ನು ಜಯಿಸಿತು. ಅತುತ್ತಮ ಬ್ಯಾಟಿಂಗಿಗಾಗಿ ಫೈನಲ್  ಪಂದ್ಯದ   ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬಿ. ಕೆ ವಾರಿಯರ್ಸ್ ನ ಜಸ್ವೀರ್ ಪಡೆದರು.,ಶ್ರೇಷ್ಠ  ಬ್ಯಾಟ್ಸಮನ್ ಆಗಿ  ಪ್ಯಾಂಥರ್ಸ್ ನ ಇಮ್ರಾನ್ ಮತ್ತು ಶ್ರೇಷ್ಠ ಬೌಲರ್ ಆಗಿ ಪ್ಯಾಂಥರ್ಸ್ ನ ಮೋಹಿನ್ ಪ್ರಶಸ್ತಿಯನ್ನು ಪಡೆದರು .

- Advertisement -

ಪ್ರಶಸ್ತಿಯನ್ನು ಹಸ್ತಾಂತರಿಸುತ್ತ ಮಾತಾಡಿದ  ಕಿಸ್ವ ಇದರ ಅಧ್ಯಕ್ಷರಾದ  ಇಸ್ಮಾಯಿಲ್  NGC ರವರು ಪಶಸ್ತಿ ಜಯಿಸಿದ ಬಿ ಕೆ ವಾರಿಯರ್ಸ್  ತಂಡಕ್ಕೆ  ಅಭಿನಂದನೆಗಳನ್ನು ಸಲ್ಲಿಸುತ್ತಾ  ಕಿಸ್ವ ಇದರ ಸಮುದಾಯ ಸೇವೆಗೆ  ಪ್ರತಿಯೊಬ್ಬರು  ಕೈಜೋಡಿಸಬೇಕೆಂದು ಕರೆ ಇತ್ತರು . ಇದೆ ಸಂದರ್ಭದಲ್ಲಿ  ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಇದನ್ನು ಯಶಸ್ವಿಗೊಳಿಸಿದ  ಪ್ರತಿಯೊಂದು ತಂಡಗಳಿಗೂ ಹಾಗೂ  ಇದನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಿಕೊಟ್ಟ ಶಬೀರ್ ಜಾಕ್ ನೇತೃತ್ವದ  ಕಿಶ್ವ ಇಂಟರ್ ಲೀಗ್ ನ ಎಲ್ಲಾ ಪದಾಧಿಕಾರಿಗಳ  ಮತ್ತು ಸದಸ್ಯರ ಶ್ರಮವನ್ನು ಶ್ಲಾಘಿಸಿದರು.

ಕಿಸ್ವದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಯವರು    ಪ್ರಾಸ್ತಾವಿಕವಾಗಿ ಮಾತಾಡುತ್ತ ಕಿಸ್ವದ ಮುಂದಿನ ಯೋಜನೆಗಳನ್ನು ವಿವರಿಸಿ, ಇದರ ಯಶಸ್ವಿಗಾಗಿ ಸದಸ್ಯರೆಲ್ಲರೂ ಸಹಕರಿಸಬೇಕೆಂದು ಕರೆ ಇತ್ತರು . ಕಿಸ್ವ ಇಂಟರ್ ಲೀಗ್ ನ ಅಧ್ಯಕ್ಷರಾದ ಶಬೀರ್ ಜಾಕ್ , ಮಾರ್ಟಿಜ್ ಗ್ರೂಪ್ ನ  ಮುಹಮ್ಮದ್ ಇಷಾಮ್ ,ಅಲ್ಲೈಡ್ ನ ಅಮೀರ್ ,ಖಲೀಲ್ ಯಾಂಬು ,ಸಭಾ  ರಹೀಮ್ ,ಟೆಕ್ನೋ ವೆರಾ ದ ಕಬೀರ್ KM  ,ಈಸ್ಟರ್ನ್ ರಿಲಯನ್ಸ್ ನ  ಅನೀಸ್ ERC, ಸುಹೈಲ್ SAMCONಅರೇಬಿಯನ್ ಫಾಲ್ಕನ್ ನ ಔಫಾಜ್ ,ಟ್ರೇಡ್ ಜೋನ್ ನ  ಉನೈಸ್  ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

- Advertisement -

ಕೊನೆಯಲ್ಲಿ ಕಿಸ್ವ ಉಪಾಧ್ಯಕ್ಷರಾದ ಮುಬೀನ್ ಕೃಷ್ಣಾಪುರ  ದನ್ಯವಾದವನ್ನಿತ್ತರು. ಸಫ್ವಾನ್ ಬಜ್ಪೆ ರವರು  ಅತಿಥಿಗಳನ್ನು  ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಪಂದ್ಯಾಟದ  ಅತ್ಯುತ್ತಮ  ಛಾಯಾಗ್ರಹಣಕ್ಕಾಗಿ  ಸುಂದರ್ ದಾಸ್ ಪೂಜಾರಿ ಮತ್ತು ಆಸೀಫ್ ದಮ್ಮಾಮ್ ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯ್ತು .

Join Whatsapp