ಗುಜರಾತ್: ‘ಭಯೋತ್ಪಾದಕ’ ಎಂದು ಕರೆದು ಸಂಘಪರಿವಾರದಿಂದ ಮುಸ್ಲಿಮ್ ಯುವಕನಿಗೆ ಗಂಭೀರ ಹಲ್ಲೆ

Prasthutha|

ಸೂರತ್: ಗುಜರಾತ್ ನ ಭರೂಚ್ ಜಿಲ್ಲೆಯ ಶೇರಾ ಗ್ರಾಮದ ನಿವಾಸಿ ಮುಹಮ್ಮದ್ ಅಥಾವುಲ್ಲಾ ಕೆಲಸ ಮುಗಿಸಿ ಹಿಂದಿರುತ್ತಿದ್ದ ವೇಳೆ ಸಂಘಪರಿವಾರದ ಕಾರ್ಯಕರ್ತರ ಗುಂಪು ನಡೆಸಿದ ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.

- Advertisement -

ಗೋದ್ರಾದ ಛಬಾನ್ ಪುರ ಸೇತುವೆಯಲ್ಲಿ ಕನಿಷ್ಠ ಒಂಬತ್ತು ಮಂದಿಯನ್ನು ಸಂಘಪರಿವಾರ ಕಾರ್ಯಕರ್ತರ ಗುಂಪೊಂದು ಮುಸ್ಲಿಮ್ ವ್ಯಕ್ತಿಯ ಕಾರಿಗೆ ಕಲ್ಲು ತೂರಾಟ ನಡೆಸಿತ್ತು ಮತ್ತು ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಬಲವಂತಪಡಿಸಿತ್ತು.

ಈ ಮಧ್ಯೆ ಸಂತ್ರಸ್ತ ಯುವಕ ಅಥಾವುಲ್ಲಾ , ದಾಳಿಕೋರರ ವಿರುದ್ಧ ಗೋಧ್ರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಪ್ರಸಕ್ತ ಇದೀಗ ಅಥಾವುಲ್ಲಾ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ಸಂತ್ರಸ್ತ ಅಥಾವುಲ್ಲಾ, ಅಮಾಯಕನಾದ ನನ್ನ ಮೇಲೆ ಈಗ ಪ್ರಕರಣದಲ್ಲಿ ಸಿಲುಕಿಸಿ ಅಪರಾಧಿ ಎಂದು ಬಿಂಬಿಸಲಾಗುತ್ತಿದೆ. ಸಂಘಪರಿವಾರದ ಕಾರ್ಯಕರ್ತರ ಹಲ್ಲೆಯಿಂದಾಗಿ ನಡೆದಾಡಲು ಕಷ್ಟಪಡುವ ಸ್ಥಿತಿಯಲ್ಲಿರುವ ನನ್ನನ್ನು ಬಂಧಿಸಲು ಮುಂದಾಗಿದ್ದಾರೆ ಎಂದು ಆತ ತನ್ನ ಅಳಲನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದಾರೆ.

ಮೋಟಾರ್ ಸೈಕಲ್ ರಿಪೇರಿ ಅಂಗಡಿ ನಡೆಸುತ್ತಿರುವ ಅಥಾವುಲ್ಲಾ ಎಂಬಾತ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಸಂಘಪರಿವಾರದ ಕಾರ್ಯಕರ್ತರು ಅವರ ಕಾರನ್ನು ತಡೆದು ಗಂಭೀರವಾಗಿ ಹಲ್ಲೆ ನಡೆಸಿದ್ದರು. ಈ ವೇಳೆ ಗಡ್ಡ ಎಳೆದು, ಭಯೋತ್ಪಾದಕ ಎಂದು ಕರೆದು ತಲೆ ಮತ್ತು ಮುಖಕ್ಕೆ ಹೊಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ನಡುವೆ ಸಂತ್ರಸ್ತ ಯುವಕ ಅಥಾವುಲ್ಲಾ ನೀಡಿದ್ದ ದೂರಿನನ್ವಯ ಎಫ್.ಐ.ಆರ್ ಪ್ರತಿಯನ್ನು ನೀಡಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ.

ಪೊಲೀಸರು ಎರಡೂ ಕಡೆಯವರ ಮೇಲೂ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp