ಹಿಂದೂಗಳನ್ನು ಉದ್ಯೋಗಿಗಳಾಗಿ ನೇಮಿಸಿಕೊಳ್ಳುವುದನ್ನು ನಿಲ್ಲಿಸಿದ ಕುವೈತ್ ನ ಪ್ರಮುಖ ಸಹಕಾರ ಸಂಘ

Prasthutha|

 ಕುವೈತ್ ಸಿಟಿ:  ಶಿರವಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಸಂಘ ಪರಿವಾರದ ವಿರುದ್ಧ ಕುವೈತ್ ತನ್ನ ನಡೆಯನ್ನು ಕಠಿಣಗೊಳಿಸಿದೆ. ಕುವೈತ್ ನ 22 ಸಂಸತ್ ಸದಸ್ಯರು ಹಿಜಾಬ್ ವಿಷಯದ ಬಗ್ಗೆ ಜಂಟಿ ಹೇಳಿಕೆ ನೀಡಿದ ನಂತರ ಪ್ರಮುಖ ಕಂಪನಿಗಳು ಮತ್ತು ಸಂಸದರ ನೇತೃತ್ವದ ಸಂಸ್ಥೆಗಳು ನಿರ್ಬಂಧಗಳ ಪ್ರಕ್ರಿಯೆಗೆ ಮುಂದಾಗಿವೆ.

- Advertisement -

ಕುವೈತ್ ನ ಪ್ರಮುಖ ಸಹಕಾರ ಸಂಘವಾದ ಹಾದಿಯಾ ಕೋ-ಆಪ್ ಹಿಂದೂಗಳನ್ನು ಉದ್ಯೋಗಿಗಳಾಗಿ ನೇಮಿಸಿಕೊಳ್ಳುವುದನ್ನು ನಿಲ್ಲಿಸಿದೆ . “ಹಾದಿಯಾ ಸಹಕಾರ ಸಂಘವು ಭಾರತದ ಶೋಷಿತ ಮುಸ್ಲಿಮರನ್ನು ಬೆಂಬಲಿಸುವ ದಿಟ್ಟ ಕ್ರಮದಲ್ಲಿದೆ. ಹಿಂದೂಗಳನ್ನು ಉದ್ಯೋಗಿಗಳಾಗಿ ನೇಮಿಸುವುದನ್ನು ನಿಲ್ಲಿಸಿದೆ. ಭಾರತೀಯ ಮುಸ್ಲಿಮರ ಮಾನವ ಹಕ್ಕುಗಳನ್ನು ರಕ್ಷಿಸಲು ಅರಬರು ಒಗ್ಗೂಡುವ ಸಮಯವಿದು’ ಎಂದು ಕುವೈತ್ ವಕೀಲರ ಸಂಘದ ಮಾನವ ಹಕ್ಕುಗಳು ಮತ್ತು ಅಂತಾರಾಷ್ಟ್ರೀಯ ಮಾನವೀಯ ಕಾನೂನು ಕೇಂದ್ರದ ನಿರ್ದೇಶಕ ಮತ್ತು ಕುವೈತ್ ಇನ್ ಸ್ಟಿಟ್ಯೂಟ್ ಫಾರ್ ಪ್ರೊಟೆಕ್ಷನ್ ಆಂಡ್ ಲೀಗಲ್ ಸ್ಟಡೀಸ್ ನ ತರಬೇತಿ ಸಮಿತಿಯ ಸದಸ್ಯ ಮೆಜ್ಬಲ್ ಅಲ್-ಶ್ರಿಕಾ ಅವರು ಟ್ವೀಟ್ ಮಾಡಿದ್ದಾರೆ.

ಶಿರವಸ್ತ್ರ ನಿಷೇಧದ ವಿರುದ್ಧ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಕುವೈತ್ ಸಂಸತ್ ಸದಸ್ಯರು ಭಾರತದ ಆಡಳಿತಾರೂಢ ಬಿಜೆಪಿಯ ಯಾವುದೇ ನಾಯಕ ಅಥವಾ ಸದಸ್ಯರು ಕುವೈತ್ ಪ್ರವೇಶಿಸದಂತೆ  ನಿಷೇಧ ಹೇರಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಶಿರವಸ್ತ್ರ ನಿಷೇಧ ಮತ್ತು ಭಾರತದಲ್ಲಿ ಮುಸ್ಲಿಮರ ಮೇಲೆ ಹೆಚ್ಚುತ್ತಿರುವ ದಾಳಿ ಕುವೈತ್ ಸಂಸದರನ್ನು ಕೆರಳಿಸಿದ್ದು ಹಿಜಾಬ್ ಧರಿಸಿದ್ದಕ್ಕಾಗಿ ಮುಸ್ಲಿಂ ಹುಡುಗಿಯರು ಸಾರ್ವಜನಿಕ ಅವಮಾನ ಎದುರಿಸುತ್ತಿರುವುದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

Join Whatsapp