ಸೌದಿಅರೇಬಿಯಾ: ಅಲ್- ಜುಬೈಲ್ ನಲ್ಲಿ ಇತ್ತಿಚೀಗೆ ನಡೆದ ಕಿಸ್ವ ಇಂಟರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ನ ಫೈನಲ್ ಪಂದ್ಯದಲ್ಲಿ ಬಿ ಕೆ ವಾರಿಯರ್ಸ್ ತಂಡವು ಪ್ಯಾಂಥರ್ಸ್ ತಂಡವನ್ನು 9 ವಿಕೆಟ್ ಗಳಿಂದ ಸೋಲಿಸಿ ಚೊಚ್ಚಲ “ಕಿಸ್ವ ಕಿಲ್ ಕ್ರಿಕೆಟ್ ಟ್ರೋಫಿ -2022 “ ಯನ್ನು ಜಯಿಸಿತು. ಅತುತ್ತಮ ಬ್ಯಾಟಿಂಗಿಗಾಗಿ ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬಿ. ಕೆ ವಾರಿಯರ್ಸ್ ನ ಜಸ್ವೀರ್ ಪಡೆದರು.,ಶ್ರೇಷ್ಠ ಬ್ಯಾಟ್ಸಮನ್ ಆಗಿ ಪ್ಯಾಂಥರ್ಸ್ ನ ಇಮ್ರಾನ್ ಮತ್ತು ಶ್ರೇಷ್ಠ ಬೌಲರ್ ಆಗಿ ಪ್ಯಾಂಥರ್ಸ್ ನ ಮೋಹಿನ್ ಪ್ರಶಸ್ತಿಯನ್ನು ಪಡೆದರು .
ಪ್ರಶಸ್ತಿಯನ್ನು ಹಸ್ತಾಂತರಿಸುತ್ತ ಮಾತಾಡಿದ ಕಿಸ್ವ ಇದರ ಅಧ್ಯಕ್ಷರಾದ ಇಸ್ಮಾಯಿಲ್ NGC ರವರು ಪಶಸ್ತಿ ಜಯಿಸಿದ ಬಿ ಕೆ ವಾರಿಯರ್ಸ್ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಕಿಸ್ವ ಇದರ ಸಮುದಾಯ ಸೇವೆಗೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕರೆ ಇತ್ತರು . ಇದೆ ಸಂದರ್ಭದಲ್ಲಿ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಇದನ್ನು ಯಶಸ್ವಿಗೊಳಿಸಿದ ಪ್ರತಿಯೊಂದು ತಂಡಗಳಿಗೂ ಹಾಗೂ ಇದನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಿಕೊಟ್ಟ ಶಬೀರ್ ಜಾಕ್ ನೇತೃತ್ವದ ಕಿಶ್ವ ಇಂಟರ್ ಲೀಗ್ ನ ಎಲ್ಲಾ ಪದಾಧಿಕಾರಿಗಳ ಮತ್ತು ಸದಸ್ಯರ ಶ್ರಮವನ್ನು ಶ್ಲಾಘಿಸಿದರು.
ಕಿಸ್ವದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಯವರು ಪ್ರಾಸ್ತಾವಿಕವಾಗಿ ಮಾತಾಡುತ್ತ ಕಿಸ್ವದ ಮುಂದಿನ ಯೋಜನೆಗಳನ್ನು ವಿವರಿಸಿ, ಇದರ ಯಶಸ್ವಿಗಾಗಿ ಸದಸ್ಯರೆಲ್ಲರೂ ಸಹಕರಿಸಬೇಕೆಂದು ಕರೆ ಇತ್ತರು . ಕಿಸ್ವ ಇಂಟರ್ ಲೀಗ್ ನ ಅಧ್ಯಕ್ಷರಾದ ಶಬೀರ್ ಜಾಕ್ , ಮಾರ್ಟಿಜ್ ಗ್ರೂಪ್ ನ ಮುಹಮ್ಮದ್ ಇಷಾಮ್ ,ಅಲ್ಲೈಡ್ ನ ಅಮೀರ್ ,ಖಲೀಲ್ ಯಾಂಬು ,ಸಭಾ ರಹೀಮ್ ,ಟೆಕ್ನೋ ವೆರಾ ದ ಕಬೀರ್ KM ,ಈಸ್ಟರ್ನ್ ರಿಲಯನ್ಸ್ ನ ಅನೀಸ್ ERC, ಸುಹೈಲ್ SAMCON , ಅರೇಬಿಯನ್ ಫಾಲ್ಕನ್ ನ ಔಫಾಜ್ ,ಟ್ರೇಡ್ ಜೋನ್ ನ ಉನೈಸ್ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೊನೆಯಲ್ಲಿ ಕಿಸ್ವ ಉಪಾಧ್ಯಕ್ಷರಾದ ಮುಬೀನ್ ಕೃಷ್ಣಾಪುರ ದನ್ಯವಾದವನ್ನಿತ್ತರು. ಸಫ್ವಾನ್ ಬಜ್ಪೆ ರವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಪಂದ್ಯಾಟದ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಸುಂದರ್ ದಾಸ್ ಪೂಜಾರಿ ಮತ್ತು ಆಸೀಫ್ ದಮ್ಮಾಮ್ ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯ್ತು .