ಜಪಾನ್ ಸಾರ್ವತ್ರಿಕ ಚುನಾವಣೆಯಲ್ಲಿ ಕಿಶಿದಾಗೆ ಅಮೋಘ ಜಯ । ಮುಂದಿನ ಪ್ರಧಾನಿಯಾಗುವ ಸಾಧ್ಯತೆ

Prasthutha|

ಟೋಕಿಯೋ: ಜಪಾನ್ ನ ಸಾರ್ವತ್ರಿಕ ಚುನಾವಣೆಯಲ್ಲಿ ಬುಧವಾರ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಯ ಮಾಜಿ ವಿದೇಶಾಂಗ ಸಚಿವ ಫ್ಯೂಮಿಯೊ ಕಿಶಿದಾ ಅವರು ಅಮೋಘವಾಗಿ ಜಯಗಳಿಸಿದ್ದಾರೆ. ಅವರೇ ಮುಂದಿನ ಪ್ರಧಾನಿ ಎಂದು ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸಿದ್ದಾರೆ.

- Advertisement -

ಈ ಹಿಂದೆ ರಕ್ಷಣಾ ಮತ್ತು ವಿದೇಶಾಂಗ ಸಚಿವ ಸ್ಥಾನಗಳನ್ನು ಹೊಂದಿದ್ದ ಜನಪ್ರಿಯ ಲಸಿಕೆ ಮಂತ್ರಿ ಟಾರೊ ಕೊನೊ ಅವರನ್ನು ಸೋಲಿಸಲು ಕಿಶಿದಾ ಬುಧವಾರದ ಮತದಾನದಲ್ಲಿ 257 ಮತಗಳನ್ನು ಗೆದ್ದರು.

64 ರ ಹರೆಯದವರು ಪಕ್ಷದ ನಿರ್ಗಮಿತ ನಾಯಕ ಯೋಶಿಹೈಡೆ ಸುಗಾ ಅವರ ಸ್ಥಾನವನ್ನು ಕಿಶಿದಾ ತುಂಬಲಿದ್ದಾರೆ. ಕಳೆದ ಸೆಪ್ಟೆಂಬರ್ ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಕೇವಲ ಒಂದು ವರ್ಷದ ಸೇವೆಯ ನಂತರ ಸುಗಾ ಅವರು ನಿರ್ಗಮಿಸಲಿದ್ದಾರೆ.

- Advertisement -

ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್.ಡಿ.ಪಿ) ಇದರ ನೂತನ ನಾಯಕನಾಗಿ ಹೊರಹೊಮ್ಮಿದ ಕಿಶಿದಾ ಸಂಸತ್ತಿನಲ್ಲಿ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ.

Join Whatsapp