ಸುರತ್ಕಲ್ ಜಲೀಲ್ ಹತ್ಯೆ| ನ್ಯಾಯ ಸಿಗುವವರೆಗೂ ತೀವ್ರ ಹೋರಾಟದ ಅಗತ್ಯವಿದೆ: ಆಮಿರ್ ಬನ್ನೂರು

Prasthutha|

ಮಂಗಳೂರು: ದುಷ್ಕರ್ಮಿಗಳ ಚೂರಿ ಇರಿತಕ್ಕೆ ಬಲಿಯಾದ ಅಮಾಯಕ ಜಲೀಲ್ ಅವರಿಗೆ ನ್ಯಾಯ ಸಿಗುವವರೆಗೂ ತೀವ್ರವಾದ ಹೋರಾಟದ ಅಗತ್ಯವಿದೆ ಎಂದು ಸಾಮಾಜಿಕ ಹೋರಾಟಗಾರ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕ ಆಮಿರ್ ಬನ್ನೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಜಲೀಲ್ ಅವರನ್ನು ಅಮಾನುಷವಾಗಿ ಹತ್ಯೆ ಮಾಡಿರುವುದು ಖಂಡನೀಯವಾಗಿದೆ. ಶಾಂತಿ ಸೌಹಾರ್ದತೆಯ ತಾಣವಾಗಿದ್ದ ಕರಾವಳಿಯಲ್ಲಿ ಇಂತಹ ಕೃತ್ಯಗಳು ಪದೇ ಪದೇ ನಡೆಯಲಿಕ್ಕಿರುವ ಕಾರಣ ಧರ್ಮ ರಾಜಕೀಯದ ಮೊರೆ ಹೋದ ರಾಜಕಾರಣಿಗಳು ಅಮಾನವೀಯ ಕೃತ್ಯಗಳಿಗೆ ಪ್ರಚೋದನೆ ನೀಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೂರು ಹತ್ಯೆಗಳಿಂದ ಭಯ ಭೀತರಾಗಿದ್ದ ಕರಾವಳಿಯ ನಾಗರಿಕರಲ್ಲಿ ಮತ್ತೊಂದು ಕೊಲೆಯ ಸುದ್ದಿ ಆತಂಕವನ್ನು ಮತ್ತು ಭಯವನ್ನು ಉಂಟು ಮಾಡಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

 ಜಲೀಲ್ ರಂತಹ ಅಮಾಯಕರ ಜೀವದ ಮೇಲೆ ರಾಜಕಾರಣ ಮಾಡುತ್ತಿರುವ ಅಮಾನುಷಿಕ ಮನಸ್ಥಿತಿಯುಳ್ಳವರಿಂದ ಕರಾವಳಿಯ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಮುಂದಿನ ದಿನಮಾನಗಳಲ್ಲಿ ಸರಕಾರ ಹಾಗೂ ಮಾನವನ ಸಂರಕ್ಷಣೆಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಎಚ್ಚರವಹಿಸಿ ಸೂಕ್ತ ಕ್ರಮಗಳನ್ನು ರಾಜ್ಯಾದ್ಯಂತ ಕೈಗೊಳ್ಳಬೇಕಾಗಿದೆ. ಜಲೀಲ್ ಹತ್ಯೆ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರ ಒದಗಿಸಬೇಕಾಗಿದೆ. ನ್ಯಾಯ ಸಿಗುವವರೆಗೂ ತೀವ್ರವಾದ ಹೋರಾಟದ ಅಗತ್ಯವಿದೆ ಎಂದು ಆಮಿರ್ ಬನ್ನೂರು ತಿಳಿಸಿದ್ದಾರೆ.

Join Whatsapp