ಗುಜರಾತ್‌: ಪ್ಯಾರಾಗ್ಲೈಡಿಂಗ್ ವೇಳೆ ನೆಲಕ್ಕೆ ಅಪ್ಪಳಿಸಿ ದಕ್ಷಿಣ ಕೊರಿಯಾದ ವ್ಯಕ್ತಿ ಸಾವು

Prasthutha|

ಮೆಹಸಾನಾ: ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ ನೆಲಕ್ಕೆ ಅಪ್ಪಳಿಸಿ ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬ  ಮೃತಪಟ್ಟಿರುವ ಘಟನೆ ಗುಜರಾತ್‌ನ ಮೆಹಸಾನಾ ಜಿಲ್ಲೆಯ ಕಾಡಿ ಪಟ್ಟಣದ ಬಳಿಯ ವಿಸ್ತಾಪುರ ಎಂಬ ಹಳ್ಳಿಯಲ್ಲಿ ನಡೆದಿದೆ.

- Advertisement -

ಶಿನ್ ಬಿಯೊಂಗ್ ಮೂನ್ ಎನ್ನುವ ದಕ್ಷಿಣ ಕೊರಿಯಾದ 30 ವರ್ಷದ ವ್ಯಕ್ತಿ ವಡೋದರಾ ನಗರಕ್ಕೆ ಪ್ರವಾಸಕ್ಕೆ ಬಂದಿದ್ದು, ತನ್ನ ಸ್ನೇಹಿತನ ಜೊತೆ ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ ನೆಲಕ್ಕೆ 50 ಅಡಿ ದೂರ ಇರುವಾಗ ಪ್ಯಾರಾಗ್ಲೈಡಿಂಗ್ ಸರಿಯಾಗಿ ತೆರೆದುಕೊಳ್ಳದೇ ನೆಲಕ್ಕೆ ಅಪ್ಪಳಿಸಿ ಮೃತಪಟ್ಟಿದ್ದಾನೆ ಎಂದು ಮೆಹಸಾನಾ ಇನ್‌ಸ್ಪೆಕ್ಟರ್ ನಿಕುಂಜ್ ಪಟೇಲ್ ತಿಳಿಸಿದ್ದಾರೆ.

ಪ್ರಕರಣವನ್ನು ಭಾರತದಲ್ಲಿರುವ ದಕ್ಷಿಣ ಕೊರಿಯಾದ ರಾಯಭಾರ ಕಚೇರಿಯ ಗಮನಕ್ಕೆ ತರಲಾಗಿದ್ದು, ಮೃತದೇಹವನ್ನು ಸ್ವದೇಶಕ್ಕೆ ಕಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Join Whatsapp