ಮುಝಫರ್ ನಗರ ಗಲಭೆ ಪ್ರಕರಣ: ಬಿಜೆಪಿ ಶಾಸಕ ಸೇರಿ 11 ಮಂದಿ ಖುಲಾಸೆ

Prasthutha|

ಲಕ್ನೋ: ಮುಝಫರ್ ನಗರ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖತೌಲಿ ಕ್ಷೇತ್ರದ ಬಿಜೆಪಿ ಶಾಸಕ ಸೇರಿದಂತೆ ಹನ್ನೊಂದು ಮಂದಿ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.

- Advertisement -

ನ್ಯಾಯಾಧೀಶರಾದ ಗೋಪಾಲ್ ಉಪಾಧ್ಯಾಯ ಖತೌಲಿ ಶಾಸಕ ವಿಕ್ರಮ್ ಸೈನಿ ಮತ್ತು ಇತರ ಹನ್ನೊಂದು ಮಂದಿಯನ್ನು ನಿರ್ದೋಷಿಗಳೆಂದು ಆದೇಶಿಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್, ಗಲಭೆ ಮತ್ತು ಬೆಂಕಿ ಹಚ್ಚಿದ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ನ್ಯಾಯಾಧೀಶರು ಉಲ್ಲೇಖಿಸಿದರು.

ಉತ್ತರಪ್ರದೇಶದ ಮುಝಫರ್ ನಗರ ಜಿಲ್ಲೆಯ ಜನಸತ್ ಪೊಲೀಸ್ ಠಾಣೆಯ ವ್ಯಾಪ್ತಿಯ ಕಾವಲ್ ಗ್ರಾಮದಲ್ಲಿ ಗಲಭೆ, ಬೆಂಕಿ ಹಚ್ಚುವಿಕೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು ಸೇರಿದಂತೆ ಕ್ರಿಮಿನಲ್ ಪ್ರಕರಣದಲ್ಲಿ ಶಾಸಕರು ಮತ್ತು 11 ಮಂದಿ ವಿಚಾರಣೆ ಎದುರಿಸುತ್ತಿದ್ದರು.

- Advertisement -

ಕಾವಲ್ ಗ್ರಾಮದ ಮೂವರು ಯುವಕರ ಹತ್ಯೆಯಿಂದ ಉಂಟಾದ ಕೋಮು ಗಲಭೆಯಲ್ಲಿ, 60 ಜನರು ಸಾವನ್ನಪ್ಪಿದ್ದರೆ, 40,000 ಕ್ಕೂ ಹೆಚ್ಚು ಜನರು ಜಿಲ್ಲೆಯನ್ನು ತೊರೆದಿದ್ದರು.



Join Whatsapp