ಉ.ಪ್ರ.ದಲ್ಲಿ ಮುಂದುವರಿದ ಮರುನಾಮಕರಣ ಚಾಳಿ: ಫೈಜಾಬಾದ್ ರೈಲ್ವೆ ಸ್ಟೇಶನ್ ಇನ್ನು ಮುಂದೆ ಅಯೋಧ್ಯೆ ಕೈಂಟ್

Prasthutha|

ಲಖನೌ: ಉತ್ತರಪ್ರದೇಶದ ಫೈಜಾಬಾದ್ ರೈಲ್ವೆ ಸ್ಟೇಶನ್ ಹೆಸರನ್ನು ಬದಲಿಸಲು ಯೋಗಿ ಸರ್ಕಾರ ನಿರ್ಧಾರ ಮಾಡಿದೆ. ಫೈಜಾಬಾದ್ ರೈಲ್ವೆ ಸ್ಟೇಶನ್ ಬದಲಿಗೆ ಅಯೋಧ್ಯಾ ಕೈಂಟ್ ಎಂದು ಮರುನಾಮಕರಣ ಮಾಡುವುದಾಗಿ ತಿಳಿಸಿದೆ.

- Advertisement -


ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಬಳಿಕ ಮರುನಾಮಕರಣ ಆಗಲಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಕಚೇರಿ ತಿಳಿಸಿದೆ.


ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಈಗಾಗಲೇ ಹಲವು ಪ್ರದೇಶಗಳ ಹೆಸರನ್ನು ಬದಲಿಸಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

Join Whatsapp