ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ಗಲಭೆ ಪ್ರಕರಣ| ಮತ್ತೊಬ್ಬ ಆರೋಪಿ ಬಂಧನ

Prasthutha|

ಬೆಂಗಳೂರು: ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ NIA, ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಆರೋಪಿಯನ್ನ ಬಂಧಿಸಲಾಗಿದೆ.

- Advertisement -

ಬಂಧಿತನಾದ ಯುವಕನನ್ನು ತಬ್ರೇಝ್ (35) ಎಂದು ಗುರುತಿಸಲಾಗಿದೆ. ಬಹಳಷ್ಟು ನಾಶ-ನಷ್ಟಗಳಿಗೆ ಕಾರಣವಾದ 2020 ಅಗಸ್ಟ್‌ 12ರಂದು ನಡೆದ ಗಲಭೆ ವಿಚಾರವು ರಾಜಕೀಯ ಆಯಾಮವನ್ನು ಪಡೆದ ಘಟನೆಯಾಗಿತ್ತು.

ಪ್ರವಾದಿ ನಿಂದನೆಯ ಪೋಸ್ಟ್ ಹಾಕಿದ್ದ ಬಿಜೆಪಿ ಕಾರ್ಯಕರ್ತ ನವೀನ್ ಎಂಬಲ್ಲಿಂದ ಪ್ರಾರಂಭಗೊಂಡು ಈ ಘಟನೆಯಲ್ಲಿ ಕಾಂಗ್ರೆಸ್ ನಾಯಕರ ಕೈವಾಡವಿರುವುದು ತನಿಖೆಯಲ್ಲಿ ಬಹಿರಂಗವಾಗಿತ್ತು. ಅದೇ ರೀತಿ ಶಾಂತಿಯುತವಾಗಿ ಬಗೆಹರಿಸಲು ಸಾಧ್ಯವಿದ್ದ ಈ ಘಟನೆಯಲ್ಲಿ ಪೊಲೀಸರ ನಿರ್ಲಕ್ಷ್ಯ ಮತ್ತು ಬಿಜೆಪಿ ಸರಕಾರದ ಆಡಳಿತ ವೈಫಲ್ಯ ಎದ್ದುಕಂಡಿತ್ತು.

- Advertisement -

ಈ ಘಟನೆಯಲ್ಲಿ ಭಾರೀ ಸಂಖ್ಯೆಯ ಮುಸ್ಲಿಮರನ್ನು UAPA ಹೇರಿ ಜಾಮೀನು ನಿರಾಕರಿಸಿ ಜೈಲಿನಲ್ಲಿ ಕೊಳೆಯುವಂತೆ ಮಾಡಲಾಗಿತ್ತು.



Join Whatsapp