ಅದಾನಿ ಮಾಲೀಕತ್ವದ ಬಂದರಿನಲ್ಲಿ 19000 ಕೋಟಿ ರೂ.ಮೌಲ್ಯದ 3000 ಕೆ.ಜಿ.ಹೆರಾಯಿನ್ ವಶ

Prasthutha|

ಮುಂಬೈ: ಗೌತಮ್ ಅದಾನಿಯ ಮಾಲೀಕತ್ವದ ಮುಂದ್ರಾ ಬಂದರಿನಲ್ಲಿ ಸುಮಾರು 19000 ಕೋಟಿ ರೂ.ಮೌಲ್ಯದ 3000 ಕೆ.ಜಿ. ಹೆರಾಯಿನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಈ ಹೆರಾಯಿನ್ ಅನ್ನು ಅಫ್ಘಾನಿಸ್ತಾನದಿಂದ ಗೌತಮ್ ಅದಾನಿಯ ಬಂದರಿಗೆ ತರಲಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

- Advertisement -

ಅಫ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳಲಾದ 2 ಕಂಟೇನರ್‌ ಗಳಿಂದ ಈ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಈವರೆಗೆ ಇಬ್ಬರನ್ನು ಬಂಧಿಸಲಾಗಿದೆ. ಹೆರಾಯಿನ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಮತ್ತು ಕಸ್ಟಮ್ಸ್‌ನ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಲಾಗಿದೆ, ಇದನ್ನು ಸಂಸ್ಥೆಯು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಡಿಆರ್‌ಐ ಮೂಲಗಳ ಪ್ರಕಾರ, ಹೆರಾಯಿನ್ ಸಾಗಿಸುವ ಕಂಟೇನರ್‌ ಗಳನ್ನು ಆಂಧ್ರಪ್ರದೇಶದ ವಿಜಯವಾಡ ಮೂಲದ ಸಂಸ್ಥೆಯಿಂದ ಆಮದು ಮಾಡಿಕೊಳ್ಳಲಾಗಿದೆ. ಸಂಸ್ಥೆಯು ಈ ಸರಕನ್ನು ‘ಟಾಲ್ಕಂ ಪೌಡರ್’ ಎಂದು ಹೇಳಿದೆ. ರಫ್ತು ಮಾಡುವ ಸಂಸ್ಥೆಯನ್ನು ಹಸನ್ ಹುಸೇನ್ ಲಿಮಿಟೆಡ್ ಎಂದು ಹೆಸರಿಸಲಾಗಿದ್ದು, ಇದು ಅಫ್ಘಾನಿಸ್ತಾನದ ಕಂದಹಾರ್ ನಲ್ಲಿ ಇದೆ.



Join Whatsapp